ಬೆಂಗಳೂರು : ಆರೋಪಿಗೆ ಕೊರೋನಾ : ಸಿಸಿಬಿ ಕಚೇರಿ ಸೀಲ್ ಡೌನ್!!

ಬೆಂಗಳೂರು:

      ಕೊರೊನಾ ಕೇಸ್ ಪತ್ತೆಯಾದ ಕಾರಣಕ್ಕೆ ನಗರದ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.

      ಹೌದು, ಕೇಂದ್ರ ಅಪರಾಧ ತನಿಖಾ ವಿಭಾಗದ ವಶದಲ್ಲಿದ್ದ ಆರೋಪಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.

      ಬಿಬಿಎಂಪಿ ಸಿಬ್ಬಂದಿಗಳು ಸಿಸಿಬಿ ಕಚೇರಿಯನ್ನು ಎರಡು ಬಾರಿ ಸ್ಯಾನಿಟೈಸ್ ಮಾಡಿದ್ದಾರೆ. ಇದೇ ವೇಳೆ ಬ್ಬರು ಇನ್ಸ್​ಪೆಕ್ಟರ್ ಸೇರಿ 20 ಮಂದಿ ಕ್ವಾರಂಟೀನ್​ನಲ್ಲಿರಿಸಲಾಗಿದೆ. ಓಲಾ ಸಂಸ್ಥೆಗೆ ವಂಚನೆ ಮಾಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇದೇ ಕಾರಣದಿಂದ ಸಿಸಿಬಿ ಕಚೇರಿ ಸೀಲ್ ಡೌನ್ ಆಗಿದೆ. 

     ಪೊಲೀಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಚಾಮರಾಜಪೇಟೆಯಲ್ಲಿರುವ  ಸಿಸಿಬಿ ಕಚೇರಿಯನ್ನ 3 ದಿನಗಳ ಕಾಲ ಸೀಲ್​ಡೌನ್ ಆಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap