ಮಡಿಕೇರಿ:
ಪ್ರವಾಹ ಪೀಡಿತ ಕೊಡಗು ನಾಡನ್ನು ಹೊಸದಾಗಿ ಕಟ್ಟಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬುಧವಾರ ಘೋಷಿಸಿದ್ದಾರೆ.
ಅತಿವೃಷ್ಟಿ ಸಂತ್ರಸ್ತರು ,ಕೃಷಿಕರು, ಕಾರ್ಮಿಕರು, ಕಾಫಿ ಬೆಳೆಗಾರರ ಸಂಘದ ಪ್ರತಿನಿಧಿಗಳು, ಪರಿಸರ ಪ್ರೇಮಿಗಳು, ಹೋಂ ಸ್ಟೇ, ಹೊಟೆಲ್ ಮಾಲಿಕರ ಸಂಘ, ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಹೇಳಿಕೊಂಡರು.
” ಕೊಡಗಿನ ಜನರ ಸಂಕಷ್ಟ ನಮ್ಮೆಲ್ಲರ ಸಂಕಷ್ಟ ಎಂದೇ ನಾನು ಭಾವಿಸಿಕೊಂಡಿದ್ದೇನೆ. ಕೇವಲ ವಿಧಾನಸೌಧದಲ್ಲಿ ಕುಳಿತು ಅಥವಾ ಅಧಿಕಾರಿಗಳ ಅಲೋಚನೆಯಂತೆ ಜಿಲ್ಲೆ ಕಾರ್ಯಕ್ರಮಗಳನ್ನು ನಾನು ಕೈಗೊಳ್ಳುವುದಿಲ್ಲ. ಬದಲಿಗೆ ಸಂತ್ರಸ್ತರು, ಸ್ಥಳೀಯರೊಂದಿಗೆ ಸಾಂವಾದ ನಡೆಸಿ, ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುತ್ತೇನೆ. ಕೊಡಗನ್ನು ಮೊದಲಿಗಿಂತಲೂ ಉತ್ತಮವಾಗಿ ಕಟ್ಟಬೇಕೆಂಬುದು ನನ್ನ ಆಶಯ. ಅದಕ್ಕಾಗಿಯೇ ನಾನು ಇಂದು ಇಲ್ಲಿಗೆ ಬಂದಿದ್ದೇನೆ,” ಎಂದು ತಿಳಿಸಿದರು.
ಕೊಡಗು ಪ್ರವಾಹ ಪೀಡಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರು ಮನವಿ ಮಾಡಿಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ