ವಿವಾದಗಳ ಕೇಂದ್ರ ಬಿಂದುವಾದ ಲಕ್ಷ್ಮಿ ಹೆಬ್ಬಾಳ್ಕರ್

0
32

ಬೆಂಗಳೂರು

   ಕೆಲ ದಿನಗಳ ಹಿಂದೆ ಜಾರಕೀಹೊಳಿ ಬ್ರರ್ದಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಲಕ್ಷ್ಮಿ ಅವರ ಸುತ್ತ ಈಗ ಬರಿ ವಿವಾದಗಳ ಸರಮಾಲೆ ಬಿದ್ದಂತೆ ಕಾಣುತ್ತಿದೆ.ಈಗ ಪಿಎಲ್ ಡಿ ಬ್ಯಾಕ್ ಮ್ಯಾನೇಜರ್ ಅನ್ನು ಅಮಾನತು ಮಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡೆ ಮೈತ್ರಿ ಸರ್ಕಾರದಲ್ಲಿ ಮತ್ತೆ ಭಿನ್ನಾಭಿಪ್ರಾಯಕ್ಕೆ ಮತ್ತೆ ಹೊಗೆಯಾಡುವ ಸಾದ್ಯತೆ ಇದೆ ಎಂದು ರಾಜಕೀಯದಲ್ಲಿ ಗುಸು ಗುಸು ಶುರುವಾಗಿದೆ .

ಏನಿದು ವಿವಾದ?

     ರೈತರ ಖಾತೆಗೆ ಜಮಾ ಮಾಡಬೇಕಿದ್ದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಮ್ಯಾನೇಜರ್ ಎಸ್ ಟಿ ಕುಲಕರ್ಣಿ ಅವರನ್ನು ಅ.5 ರಂದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದುವರೆಗೆ ಸುಮಾರು 12 ಲಕ್ಷ ರೂ.ಗಳನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದ್ದು, ಅಮಾನತಿಗೆ ಕಾರಣ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಎಂಬ ಮಾತು ಕೇಳಿಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here