ಮೈಸೂರು :
ಹಕ್ಕಿ ಜ್ವರದ ಭೀತಿಯಿಂದ ಮೈಸೂರಿನಲ್ಲಿ ಕೋಳಿ, ಕುರಿ ಹಾಗೂ ಮೀನು ಮಾರಾಟಕ್ಕೆ ನಿರ್ಬಂಧಿಸಲಾಗಿತ್ತು. ಈಗ ಹಕ್ಕಿ ಜ್ವರದ ಭೀತಿ ದೂರವಾಗಿರುವ ಹಿನ್ನೆಲೆಯಲ್ಲಿ ಕೋಳಿ,ಕುರಿ, ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಆದರೆ ವಾರದ ಮೂರು ದಿನ ಅಂದರೆ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಕೋಳಿ, ಕುರಿ ಮತ್ತು ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಜೊತೆಗೆ ಮಟನ್ ಕೆಜಿಗೆ 500 ರೂ. ಮಾತ್ರ ಪಡೆಯಬೇಕು. ಚಿಕನ್ ಕೆ.ಜಿಗೆ 150 ರೂ. ಮಾತ್ರ ಪಡೆಯಬೇಕು ಎಂಬ ನಿರ್ಬಂಧ ಹೇರಲಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗ ಮಾತ್ರ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಮಾಂಸ ನೀಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ