ವಿಡಿಯೋ ವೈರಲ್ : ಮತ್ತೆ ಸುದ್ಧಿಯಾದ ನಲಪಾಡ್!

ಬೆಂಗಳೂರು:

      ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮ್ಯಾಚ್ ವೇಳೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

      ಭಾನುವಾರ ರಾತ್ರಿ 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯ ಆರನೇ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ. ಐಪಿಎಲ್ ಮ್ಯಾಚ್ ನೋಡಲು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸ್ಟೇಡಿಯಂಗೆ ಹೋಗಿದ್ದಾರೆ. ಆದರೆ ನಲಪಾಡ್ ಸ್ಟೇಡಿಯಂನ ಗ್ಯಾಲರಿಯಲ್ಲಿ ನಿಂತು ಪದೇ ಪದೇ ಚೌಕಿದಾರ್ ಚೋರ್ ಹೇ…ಚೌಕಿದಾರ್ ಚೋರ್ ಹೇ… ಎಂದು ಘೋಷಣೆ ಕೂಗಿದ್ದಾರೆ.

      ಇನ್ನು ಮಹಮ್ಮದ್ ನಲಪಾಡ್ ಅವರ ಕೂಗುತ್ತಿರುವ ಘೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap