ಡಿಕೆಶಿ ಬಳಿ ಆಪರೇಷನ್ ಕಮಲಕ್ಕೊಳಗಾದ ಶಾಸಕರ ಮಾಹಿತಿ!!

0
123

ಬೆಂಗಳೂರು :

      ಆಪರೇಷನ್ ಕಮಲಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕರ ಮಾಹಿತಿ ತನ್ನ ಬಳಿಯಿದ್ದು, ಎಲ್ಲಾ ವಿವರಗಳನ್ನು ಪಕ್ಷದ ವರಿಷ್ಠರು, ಸರ್ಕಾರದ ಮುಖ್ಯಸ್ಥರಿಗೆ ನೀಡಿರುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

      ಮೂವರು ಶಾಸಕರು ಮುಂಬೈಯಲ್ಲಿ ವಾಸ್ತವ್ಯ ಹೂಡಿ, ಯಾರನ್ನು ಭೇಟಿ ಮಾಡಿದ್ದರು. ವಿಮಾನ ಟಿಕೆಟ್, ಹೋಟೇಲ್ ವಾಸ್ತವ್ಯದ ಸಮಗ್ರ ಮಾಹಿತಿಯನ್ನು ಪಕ್ಷದ ಅಧ್ಯಕ್ಷರು,ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.

      ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಸಂಪರ್ಕದಲ್ಲಿರುವ ಶಾಸಕರ ವಿವರಗಳನ್ನು ಆದಷ್ಟು ಶೀಘ್ರವಾಗಿ ದಾಖಲೆ ಸಮೇತ ಬಹಿರಂಗ ಮಾಡುತ್ತೇನೆ. ಬಿಜೆಪಿಯವರು ಕುದುರೆ ವ್ಯಾಪಾರಕ್ಕೆ ದೊಡ್ಡಮಟ್ಟದ ಯೋಜನೆ ರೂಪಿಸಿದ್ದಾರೆ. ಸಂಕ್ರಾಂತಿ ಬಳಿಕ ಹೊಸ ಸರ್ಕಾರದ ಕ್ರಾಂತಿ ಆಗುತ್ತದೆ ಎನ್ನುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮುಂಬೈ ಮತ್ತು ದೆಹಲಿಯಲ್ಲಿ ಹಲವು ಬೆಳವಣಿಗಳು ನಡೆದಿವೆ ಎಂದರು.

      ಗಣೇಶ್ ಹುಕ್ಕೇರಿ ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿ ಬರೀ ವದಂತಿ. ಹುಕ್ಕೇರಿ ಕುಟುಂಬದವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರು ಅವರನ್ನು ವಿವಾದಕ್ಕೆ ಎಳೆದು ತರುವು ಸೂಕ್ತವಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here