ದೆಹಲಿ ಹಿಂಸಾಚಾರ : 400 ಬಾರಿ ಇರಿದು ಅಂಕಿತ್ ಶರ್ಮಾ ಕೊಲೆ!!

ನವದೆಹಲಿ:

     ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು 400ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಕ್ರೂರವಾಗಿ ಇರಿದು ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

      ಅಂಕಿತ್ ಶರ್ಮಾ ಅವರ ದೇಹವನ್ನು ಸುಮಾರು ನಾಲ್ಕರಿಂದ ಆರು ಗಂಟೆಯವರೆಗೆ ಚಾಕುವಿನಿಂದ ಸತತವಾಗಿ ಇರಿದು ಕೊಲ್ಲಲಾಗಿದೆ. ಆರು ಮಂದಿ ಒಟ್ಟಿಗೆ ಚಾಕುವಿನಿಂದ ಇರಿದಿರುವ ಸಾಧ್ಯತೆ ಇದೆ. ಅಂಕಿತ್ ಶರ್ಮಾ ಅವರ ದೇಹದ ಒಂದೇ ಒಂದು ಭಾಗವನ್ನೂ ಬಿಡದೆ ಪ್ರತಿ ಜಾಗವನ್ನೂ ಚುಚ್ಚಲಾಗಿದೆ ಎಂಬ ಎದೆನಡುಗಿಸುವ ಸಂಗತಿಯನ್ನು ಮರಣೋತ್ತರ ಪರೀಕ್ಷೆ ವರದಿ ಬಹಿರಂಗಪಡಿಸಿದೆ.

      2017 ರಿಂದ ಗುಪ್ತಚರ ಇಲಾಖೆಯಲ್ಲಿ ಭದ್ರತಾ ಸಹಾಯಕರಾಗಿದ್ದ ಅಂಕಿತ್ ಶರ್ಮಾ ತಾವು ವಾಸಿಸುತ್ತಿದ್ದ ಹಿಂಸಾಚಾರ ಪೀಡಿತ ಚಂದ್ ಬಾಗ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರು ಕಚೇರಿಯಿಂದ ಮನೆಗೆ ಮರಳಿದ ನಂತರ ಗಲಭೆಪೀಡಿತ ಪ್ರದೇಶದ ಪರಿಸ್ಥಿತಿ ನೋಡಲು ಹೋಗಿದ್ದಾರೆ. ಈ ವೇಳೆ ಕೆಲ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಶವವನ್ನು ಚರಂಡಿಗೆ ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

      ಅಂಕಿತ್ ಶರ್ಮಾ ಸಾವಿಗೆ ಸಂಬಂಧಿಸಿದಂತೆ ಆಪ್ ಕೌನ್ಸಿಲರ್‌ ತಾಹಿರ್‌ ಹುಸೇನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link