ರಾಜಕೀಯದಲ್ಲಿ ಧರ್ಮವಿದ್ದರೆ ಒಳ್ಳೆಯದು. ಆದರೆ, ಧರ್ಮದಲ್ಲಿಯೇ ರಾಜಕೀಯ ಬೇಡ

0
37

ಲಕ್ಷ್ಮೇಶ್ವರ: 

     ನಮ್ಮ ದೇಶದಲ್ಲಿ ಜಾತಿ ಧರ್ಮ ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ತುಂಬಾ ಮಂದಿ ಇದ್ದಾರೆ ಅವರಿಗೆ ಇನ್ನೇನು ಚುನಾವಣೆ ಬಂತು ಎಂದರೆ ಧರ್ಮ ನೆನಪಾಗುತ್ತದೆ ಧರ್ಮದ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

     ದಸರಾ ಧರ್ಮ ಸಮ್ಮೇಳನದಲ್ಲಿ ವೀರಸೋಮೇಶ್ವರ ಚರಿತಾಮೃತ ಕಿರು ಹೊತ್ತಿಗೆ ಬಿಡುಗಡೆ ಮಾಡಿ ವೀರಶೈವ ಲಿಂಗಾಯತ ಧರ್ಮಗಳು ಯಾವತ್ತು ಬೇರೆ ಅಲ್ಲ, ಎರಡೂ ಒಂದೇ ಧರ್ಮ ಒಡೆಯಲು ಮಾಡುವ ಯಾವ ಪ್ರಯತ್ನವೂ ಫಲ ಕೊಟ್ಟಲ್ಲ ಎಂದು ಅವರು ಹೇಳಿದ್ದಾರೆ.

    ಕೆಲವು ಧರ್ಮ ವಿಭಜಕರು ಡಿ.10ರಂದು ದೆಹಲಿಯಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮಗಳು ಬೇರೆ ಎಂದು ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಅದಕ್ಕೆ ಎಂದಿಗೂ ಜಯ ಸಿಗುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲವು ರಾಜಕಾರಣಿಗಳು ಧರ್ಮದ ವಿಷಯ ಮುಂದಿಟ್ಟುಕೊಂಡು ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿರುವುದು ಸರಿಯಲ್ಲ. ರಾಜಕಾರಣದಲ್ಲಿ ಧರ್ಮವಿದ್ದರೆ ಒಳ್ಳೆಯದು. ಆದರೆ, ಧರ್ಮದಲ್ಲಿಯೇ ರಾಜಕೀಯ ಬೆರೆಸಬಾರದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here