ಮೈಸೂರು ವಿವಿಯಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ!!

ಮೈಸೂರು : 

      ದಿವಂಗತ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

      ವಿವಿಯ ಲಲಿತಕಲೆಗಳ ಕಾಲೇಜಿನಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ ಸ್ಥಾಪನೆಯಾಗಲಿದ್ದು, ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯನ್ನು ಪ್ರಧಾನ ಉದ್ದೇಶವನ್ನಾಗಿ ಇರಿಸಿಕೊಂಡು ಸಂಗೀತದ ಎಲ್ಲಾ ಪ್ರಕಾರಗಳ ಬಹುಮುಖ ಬೆಳವಣಿಗೆಗಾಗಿ ಪೀಠವನ್ನು ಭೂಮಿಕೆಯಾಗಿ ಅಳವಡಿಸಿಕೊಂಡು ಇದರ ಕಾರ್ಯ ವ್ಯಾಪ್ತಿಯನ್ನು ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸುವುದು ಉದ್ದೇಶ.

     ಪೀಠದ ಆರಂಭಕ್ಕೆ ವಾರ್ಷಿಕವಾಗಿ ಐದು ಲಕ್ಷ ರೂ. ಮೀಸಲು ಇರಿಸಲಾಗಿದೆ. ಈ ಅನುದಾನದಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ ಮುಂತಾದ ಶೈಕ್ಷಣಿಕ ಕಾರ್ಯಗಳನ್ನು ಆಯೋಜಿಸುವುದು. ಇವೆಲ್ಲವನ್ನು ನಿರ್ವಹಿಸಲು ಕ್ಷೇತ್ರ ತಜ್ಞರೊಬ್ಬರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ(ವಾರ್ಷಿಕ) ನೇಮಿಸಿಕೊಳ್ಳುವುದು, ಗೌರವ ಸಂಭಾವನೆ ನೀಡಲು ನಿರ್ಧರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap