ಮಡಿಕೇರಿ:
ಕಾಡಾನೆಯಿಂದ ತಿವಿತಕ್ಕೊಳಗಾಗಿ ರೈತನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆ ಶ್ರೀಮಂಗಲ ಕುಟ್ಟ ಹೆದ್ದಾರಿ ಬಳಿ ನಡೆದಿದೆ.
ಸದಾ ಕುಟ್ಟಪ್ಪ(40) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಕಾಯಿಮನೆಯಲ್ಲಿ ಬೆಳಗ್ಗೆ ತೋಟಕ್ಕೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿ ಮಾಡಿದ್ದು, ಕುಟ್ಟಪ್ಪರನ್ನು ತಿವಿದು ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಇದರಿಂದ ಹೊಟ್ಟೆ ಹಾಗೂ ದೇಹದ ಭಾಗಗಳಿಗೆ ಹಾನಿಯಾಗಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ರೈತನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸ್ಥಳದಲ್ಲಿ ಸ್ಥಳೀಯ ರೈತರು-ಕಾರ್ಮಿಕರು, ನಾಗರಿಕರು ಜಮಾಯಿಸಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
