ಬೆಂಗಳೂರು:
ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿದ್ದಾರೆ.
ಬೆನ್ನು ನೋವು ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಎಚ್. ಎಂ ರೇವಣ್ಣ ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡೇ ಆಗಮಿಸಿ, ಮಹಾಲಕ್ಷ್ಮಿ ಲೇಔಟ್‍ನ ಅಂಬೇಡ್ಕರ್ ಸ್ಕೂಲ್ ನ 141 ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ಮತದಾನದ ನಂತರ ಮಾತನಾಡಿದ ಅವರು, ನನಗೆ ಸ್ಪಿನಲ್ ಕಾರ್ಡ್ ಸಮಸ್ಯೆಯಿದೆ. ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ. ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆ. ಇದೊಂದು ಉತ್ತಮ ಅವಕಾಶ ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ