ಬೆಂಗಳೂರು :
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಹಾಗೂ ರಾಜಕೀಯ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರವರು ರಾಜೀನಾಮೆ ನೀಡಿದ್ದಾರೆ.
ಫಲಿತಾಂಶ ನೋಡಿ ನಮಗೆ ಶಾಕ್ ಆಗಿದೆ. ಜನತಾ ನ್ಯಾಯಾಲಯ ಒಳ್ಳೆಯ ತೀರ್ಪು ಕೊಡುತ್ತೆ, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಶಿಕ್ಷೆ ಆಗುತ್ತೆ ಅಂತ ಅಂದುಕೊಂಡಿದ್ವಿ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಬಯಸಿದ್ದನ್ನ ನಾವೆಲ್ಲಾ ಗೌರವಿಸ್ತೀವಿ
ನಮ್ಮ ಅಪೇಕ್ಷೆ ಮೀರಿದ ತೀರ್ಪು ಜನರಿಂದ ಬಂದಿದೆ. ಕಾಂಗ್ರೆಸ್ ಸೋಲು-ಗೆಲುವಿನಲ್ಲಿ ನನ್ನ ಜವಾಬ್ದಾರಿ ಇದೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದೆ.ಅಂದಿನ ಚುನಾವಣೆಗೆ ಜವಾಬ್ದಾರಿ ವಹಿಸಿಕೊಂಡಿದ್ದರೂ ಸಹ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.ಅಂದಿನ ಸಂದರ್ಭ ಹಾಗಿತ್ತು.ನನಗೆ ಎಐಸಿಸಿ, ಕೆಪಿಸಿಸಿ ಇಲ್ಲಿಯವರೆಗೂ ಎಲ್ಲಾ ಆಯ್ಕೆಗಳಲ್ಲಿಯೂ ಮುಕ್ತ ಅವಕಾಶ ನೀಡಿ ಸಹಕಾರ ನೀಡಿದ್ದರು.ನನ್ನ ಒಪ್ಪಿಗೆ ಇಲ್ಲದೇ ಎಐಸಿಸಿ ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ಭಾನುವಾರವೇ ನನಗೆ ಚುನಾವಣೆ ಫಲಿತಾಂಶದ ಬಗ್ಗೆ ಅನುಮಾನ ಭಯವಿತ್ತು.ಫಲಿತಾಂಶ ವ್ಯತಿರಿಕ್ತವಾದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಎಐಸಿಸಿ ನಾಯಕರಿಗೆ ಹೇಳಿದ್ದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಸರ್ಕಾರ ಅಸ್ಥಿರತೆ ಸೇರಿದಂತೆ ಹಲವು ಸಂದರ್ಭ ಸನ್ನಿವೇಶಗಳು ಬಂದಿವೆ.ಎಲ್ಲವನ್ನೂ ಶಕ್ತಿಮೀರಿ ನಿಭಾಯಿಸಿ ಕೆಲಸ ಮಾಡಿದ್ದೇನೆ.ಈಗ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.
ಪ್ರಜಾಪ್ರಭುತ್ವದ ಮಹತ್ವ ಎಂದರೆ, ಪ್ರಜೆಗಳು ಬಯಸುವುದೇ ಅಂತಿಮ ತೀರ್ಪು. ಅದಕ್ಕೆ ನಾವು ಪ್ರಜಾತೀರ್ಪನ್ನು ಖಂಡಿತ ಗೌರವಿಸುತ್ತೇವೆ. ನಾವು ಅದನ್ನು ತಪ್ಪಾಗಿ ಗ್ರಹಿಸುವುದಿಲ್ಲ. ನಾವು ಬೇರೆ ಅಪೇಕ್ಷಿಸಿದ್ದೆವು. ಆದರೆ, ಜನರ ತೀರ್ಪೇ ಬೇರೆ ಆಗಿದೆ. ಕಾಂಗ್ರೆಸ್ ನಿಂದ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ, ಗೆಲುವು ಸಾಧಿಸಿರುವ ಬಿಜೆಪಿಯ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ