ಬೆಂಗಳೂರು :
ಮುಷ್ಕರ ನಿರತ ಸಾರಿಗೆ ನೌಕರರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಂತ 10 ಬೇಡಿಕೆಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂಬುದಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಹೊರತಾಗಿ 9 ಬೇಡಿಕೆಗಳಿಗೆ ಅಸ್ತು ಎಂದಿದೆ.
ಇಂದು ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಕೆಎಸ್ ಆರ್ ಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರು, ರಾಜ್ಯ ಸರ್ಕಾರ 9 ಬೇಡಿಕೆಗಳ ಈಡೇರಿಕೆ ಬಗ್ಗೆ ಲಿಖಿತ ರೂಪದಲ್ಲಿ ಆದೇಶ ಪ್ರತಿಯನ್ನು ಸರ್ಕಾರದ ಪ್ರತಿನಿಧಿ ಬಂದು ಕೊಡಬೇಕು. ಲಿಖಿತ ರೂಪದಲ್ಲಿ ಆದೇಶ ಪ್ರತಿಕೊಡುವವರೆಗೂ ಮುಷ್ಕರ ಮುಂದುವರೆಯುತ್ತದೆ ಎಂದು ಹೇಳಿದ್ದರು.
ಸಾರಿಗೆ ನೌಕರರ ಭರವಸೆಗಳ ಕುರಿತ ಬಗ್ಗೆ ಲಿಖಿತ ಪತ್ರದ ಮೂಲಕ ಸರ್ಕಾರದ ಪ್ರತಿನಿಧಿಯಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ನಗರದ ಫ್ರೀಡಂಪಾರ್ಕ್ ಗೆ ಆಗಮಿಸಿ ಮುಷ್ಕರ ನಿರತ ನೌಕರರಿಗೆ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸಿದಂತ ಬೇಡಿಕೆ ಪತ್ರ ನೀಡಿದ್ದರಿಂದಾಗಿ, ಸಾರಿಗೆ ನೌಕರರ ಮುಷ್ಕರ ಸುಖಾಂತ್ಯಗೊಂಡಿದೆ. ಕೊನೆಗೂ ರಾಜ್ಯ ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ