ಕೊರಟಗೆರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಚಿರತೆಗಳ ಭೀತಿ!!!

0
190

ತುಮಕೂರು : 

    ಚಿರತೆ ದಾಳಿಗೆ ಸಾಕು ನಾಯಿಯೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಓಬಳದೇವರಹಳ್ಳಿ ಯಲ್ಲಿ ನಡೆದಿದೆ.

    ತಾಲ್ಲೂಕಿನ ಓಬ್ಬಳದೇವರಹಳ್ಳಿ, ಬುರುಗನಹಳ್ಳಿ, ಮಲ್ಲಪನಹಳ್ಳಿ ಗ್ರಾಮದ ಬೆಟ್ಟಗಳಲ್ಲಿ ಚಿರತೆ ಗಳ ಹಾವಳಿ ಹೆಚ್ಚಾಗಿದ್ದು,  ಕುರಿ, ಮೇಕೆಗಳ ಮೇಲೆ ದಾಳಿ ಮಾಡುತ್ತಲೇ ಇವೆ. ಚಿರತೆಗಳನ್ನು ಸೆರೆ ಹಿಡಿಯುವಂತೆ ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

     ಬೆಟ್ಟದ ತಪ್ಪಲಿನಲ್ಲಿ ಇನ್ನು ಹಲವಾರು ಚಿರತೆಗಳಿದ್ದು , ಯಾವ ಸಮಯದಲ್ಲಾದರೂ ದಾಳಿ ಮಾಡಬಹುದೆಂಬ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

 

LEAVE A REPLY

Please enter your comment!
Please enter your name here