ತುಮಕೂರು : ನವದಂಪತಿಯಿಂದ ಮತದಾನ!

ತುಮಕೂರು :

      ರಾಜ್ಯದ ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ನಗರದ ನವ ದಂಪತಿ ನೇರವಾಗಿ ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.

       ನಗರದ ಡಿಎನ್ ಡಿಎಸ್ ಕಲ್ಯಾಣ ಮಂಟಪದಲ್ಲಿಂದು ಅಪೂರ್ವ ಮತ್ತು ಪ್ರವೀಣ್ ಕುಮಾರ ರವರ ಮದುವೆ ನಿಶ್ಚಯವಾಗಿತ್ತು. ಈ ದಂಪತಿ ಸಪ್ತಪದಿ ತುಳಿದ ನಂತರ ನೇರವಾಗಿ ಭಾಗ್ಯ ನಗರದ ಮತಗಟ್ಟೆ ಸಂಖ್ಯೆ 125 ರಲ್ಲಿ ಮತಗಟ್ಟೆಗೆ ತೆರಳಿ ಮತಚಲಾಯಿಸಿದ್ದಾರೆ.

      ಈ ವೇಳೆ ಅಪೂರ್ವ ಮತ್ತು ಪ್ರವೀಣ್ ಕುಮಾರ ನವದಂಪತಿಗೆ ಮತಗಟ್ಟೆ ಬಳಿ ಇದ್ದ ಮತದಾರರು ಶುಭ ಕೋರಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link