ತಮ್ಮ ಹೆಸರಲ್ಲಿದ್ದ 3.2 ಕೋಟಿ ವಿಮೆ ಹಣಕ್ಕಾಗಿ ಮತ್ತಿಬ್ಬರ ಕೊಲೆ!!

0
73

ಆಗ್ರಾ: 

      ಇಬ್ಬರು ಆರೋಪಿಗಳು ತಾವಿಬ್ಬರು ಸತ್ತಿದ್ದೇವೆ ಎಂದು ಬಿಂಬಿಸಿ ವಿಮಾ ಕಂಪನಿಗೆ ಪಂಗನಾಮ ಹಾಕಲು ತಂತ್ರ ರೂಪಿಸಿ ಬೇರೆ ಇಬ್ಬರನ್ನು ಕೊಂದ ಘಟನೆ ತಾಜ್ ನಗರಿ ಆಗ್ರಾದಲ್ಲಿ ನಡೆದಿದೆ.

      ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಲಾಲಾರಾಮ್ (35) ಮತ್ತು ರೋಹತಾಶ್ (34) ಎಂದು ಗುರುತಿಸಲಾಗಿದೆ. 

      ತಮ್ಮ ಹೆಸರಲ್ಲಿದ್ದ 3.2 ಕೋಟಿ ಜೀವ ವಿಮೆ ಪಡೆಯಲು ಮೊದಲೇ ಯೋಜನೆ ರೂಪಿಸಿದ ಇಬ್ಬರು ಗೆಳೆಯರು ಸೇರಿಕೊಂಡು,  ಕಾರಿನಲ್ಲಿ ಇಬ್ಬರನ್ನು ಜೀವಂತ ದಹಿಸಿದ್ದಾರೆ. ಆ ಮೂಲಕ ಮೃತದೇಹಗಳ ಗುರುತು ಪತ್ತೆಯಾಗದಂತೆ ಮಾಡಿ ನಕಲಿ ಮರಣ ದಾಖಲೆ ಸೃಷ್ಟಿಸಿ ತಮ್ಮ ಹೆಸರಲ್ಲಿದ್ದ ವಿಮಾ ಹಣ ಪಡೆಯುವುದು ಅವರ ಯೋಜನೆಯಾಗಿತ್ತು. 

      ಕುನ್ವಾರ್ ಪಾಲ್(40ವರ್ಷ) ಹಾಗೂ ಲೇಖಾನ್ (38ವರ್ಷ) ಸೇರಿದಂತೆ ಇಬ್ಬರ ಸುಟ್ಟುಹೋದ ಶವ ಕಾರಿನೊಳಗೆ ಪತ್ತೆಯಾಗಿತ್ತು. ಈ ಇಬ್ಬರ ನಿಗೂಢ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿ, ದುಷ್ಕೃತ್ಯ ಎಸಗಿದ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

      

LEAVE A REPLY

Please enter your comment!
Please enter your name here