ಮೈಸೂರು :
ಸಾಂಸ್ಕೃತಿಕ ನಗರಿ ಮೈಸೂರಿನ ಕೆಆರ್‌ಎಸ್‌ನ ಬೃಂದಾವನ ಉದ್ಯಾನ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಏರಿಸಲಾಗಿದೆ.
ಮೈಸೂರಿಗೆ ಭೇಟಿಕೊಡುವ ಯಾವುದೇ ಪ್ರವಾಸಿಗರಾದರೂ, ಕೆ ಆರ್ ಎಸ್ ನ ಬೃಂದಾವನ ಉದ್ಯಾನ ವನಕ್ಕೆ ಭೇಟಿ ಕೊಟ್ಟೇ ಕೊಡುತ್ತಾರೆ. ಕೊಟ್ಟು ಅಲ್ಲಿನ ಮ್ಯೂಸಿಕಲ್ ಕಾರಂಜಿಯ ಅಂದವನ್ನು ಕಣ್ ತುಂಬಿಕೊಂಡು ಬರುತ್ತಾರೆ. ಇದೀಗ ಇಂತಹ ಕೆ.ಆರ್.ಎಸ್ ಬೃಂದಾವನದ ಪ್ರವೇಶ ಶುಲ್ಕ ಹಾಗೂ ವಾಹನ ನಿಲುಗಡೆ ಶುಲ್ಕವನ್ನು ಇದೀಗ ಪ್ರವಾಸೋದ್ಯಮ ಇಲಾಖೆ ಏರಿಕೆ ಮಾಡಿದೆ.
ಅಕ್ಟೋಬರ್ 1ರಿಂದಲೇ ಈ ಹೊಸ ಏರಿಕೆಯ ದರ ಜಾರಿಗೆ ಬಂದಿದ್ದು, ವಯಸ್ಕರಿಗೆ ರೂ.20ರಿಂದ 50ಕ್ಕೆ ಏರಿಕೆ ಮಾಡಲಾಗಿದೆ. ಮಕ್ಕಳಿಗೆ ರೂ.10 ಶಾಲಾ ಮಕ್ಕಳಿಗೆ ರೂ.5 ಶುಲ್ಕ ನಿಗಧಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ