ಶಿವಮೊಗ್ಗ : ಶೀಘ್ರದಲ್ಲೇ ಶರಾವತಿ ಒಡಲಲ್ಲಿ ಮತ್ತೊಂದು ವಿದ್ಯುತ್​ ಸ್ಥಾವರ!

ಬೆಂಗಳೂರು:

      ಶರಾವತಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ವಿವಾದಿತ ಯೋಜನೆಯ ಬೆನ್ನಲ್ಲೇ, ಇದೀಗ ಅದೇ ಕಣಿವೆಯ ಭೂಗರ್ಭದಲ್ಲಿ ವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆಗೂ ಸರ್ಕಾರ ಮುಂದಾಗಿದೆ.

      ಪಂಪ್ಡ್ ಸ್ಟೋರೇಜ್ ಮೂಲಕ ಶರಾವತಿ ನೀರು ಬಳಸಿಕೊಂಡು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಯೋಜನೆಗೆ ಪೂರಕವಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇದಕ್ಕೆ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ.

Related image

      2,000 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಉದ್ದೇಶದಿಂದ, ತಲಕಳಲೆ ಮತ್ತು ಗೇರುಸೊಪ್ಪದಲ್ಲಿ ತಲಾ 250 ಮೆಗಾವಾಟ್‌ ಉತ್ಪಾದನಾ ಸಾಮರ್ಥ್ಯದ ಎಂಟು ಘಟಕಗಳ ಸ್ಥಾವರಗಳನ್ನು ಸ್ಥಾ‍ಪಿಸುವ ಈ ಯೋಜನೆಗೆ 378 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 370 ಅರಣ್ಯ ಭೂಮಿ ಸೇರಿದೆ.

      15 ಬೋರ್‌ವೆಲ್‌ಗಳನ್ನು ಕೊರೆಯಲು ಉದ್ದೇಶಿಸಲಾಗಿದ್ದು, ಇದರಲ್ಲಿ 12 ಬೋರ್‌ವೆಲ್‌ಗಳು ಅರಣ್ಯದಲ್ಲೇ ಇರಲಿದೆ. 2017ರಲ್ಲಿ ರೂಪಿಸಿದ್ದ ಯೋಜನೆಗೆ 4,862 ಕೋಟಿ ರೂ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap