ಬೆಂಗಳೂರು :
ರಾಜ್ಯದಲ್ಲಿ ಜನವರಿ 15ರಿಂದ ಪದವಿ ಮತ್ತು ಸ್ನಾತಕೋತ್ತರ ಮೊದಲ-ದ್ವೀತೀಯ ವರ್ಷದ ವಿದ್ಯಾರ್ಥಿಗಳಿಗೂ ಆಫ್‍ಲೈನ್ ಕ್ಲಾಸ್ ಶುರುವಾಗಲಿದೆ.
ಈಗಾಗಲೇ ಜನವರಿ 1ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಅಂತಿಮ ವರ್ಷದ ತರಗತಿಗಳು ಪ್ರಾರಂಭವಾಗಿದ್ದು, ಜ.15ರಿಂದ ಡಿಗ್ರಿ, ಪಿಜಿ ತರಗತಿ ಆರಂಭಗೊಳ್ಳಲಿವೆ. ಮೊದಲ, 2ನೇ ವರ್ಷದ ಡಿಗ್ರಿ, ಪಿಜಿ ತರಗತಿ ಓಪನ್ ಆಗಲಿವೆ. ಇಂಜಿನಿಯರಿಂಗ್ ಮೂರನೇ ವರ್ಷದ ತರಗತಿಗಳೂ ಶುರು ಮಾಡಲಾಗುತ್ತದೆ. ಇಂಜಿನಿಯರಿಂಗ್‍ನ 3ನೇ ವರ್ಷದ ಹಾಗೂ ಡಿಪ್ಲೊಮೊ ತರಗತಿಗಳು ಕೂಡ ಏಕಕಾಲಕ್ಕೆ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಈಗಾಗಲೇ ಇದಕ್ಕಾಗಿ ಸಿದ್ದತೆಗಳನ್ನು ಕೈಗೊಂಡಿರುವುದಾಗಿ ವಿವರಿಸಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಆಫ್‍ಲೈನ್ ಕೋರ್ಸ್‍ಗಳು ನಡೆಯಲಿವೆ .ಈಗಾಗಲೇ ಆರಂಭವಾಗಿರುವ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಕಳೆದ ಮಾರ್ಚ್ ತಿಂಗಳಿನಿಂದ ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಆಫ್‍ಲೈನ್ ತರಗತಿ ಜ.15ರಿಂದ ಆರಂಭವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ