ಕಾಸರಗೋಡು : ದೇಗುಲದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷ!!

    ಕಾಸರಗೋಡು : 

     ಜಿಲ್ಲೆಯ ಕುಂಬಳೆ ಗ್ರಾಮದ ಪುರಾಣ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿರುವ ಬಬಿಯಾ ಗರ್ಭಗುಡಿಯಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

    ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿಯೇ ವಾಸವಾಗಿದೆ. ಇದಕ್ಕೆ ಬಬಿಯಾ ಎಂದು ಹೆಸರು ಇಡಲಾಗಿದೆ. ಆದರೆ ಇದೆಂದೂ ಕೆರೆ ಬಿಟ್ಟು ಮೇಲೆ ಬಂದಿರಲಿಲ್ಲ. ಆದರೆ ದೇಗುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಬಬಿಯಾ ಗರ್ಭಗುಡಿ ಒಳಗೆ ಪ್ರವೇಶಿಸಿರುವುದು ಅಚ್ಚರಿ ಮೂಡಿಸಿದೆ. ಇದೊಂದು ಪವಾಡ ಎನ್ನುತ್ತಿದ್ದಾರೆ ಭಕ್ತರು.

    `ದೇವಸ್ಥಾನದ ಪ್ರಾಂಗಣದೊಳಗೆ ಬಂದ ಬಬಿಯಾ ಒಂದಷ್ಟು ಹೊತ್ತು ಇಲ್ಲೇ ಕಳೆದಿತ್ತು. ಬಳಿಕ ದೇಗುಲದ ಪ್ರಧಾನ ಅರ್ಚಕ ಚಂದ್ರಪ್ರಕಾಶ್ ನಂಬಿಸನ್ ತನ್ನ ಶಾಶ್ವತ ಆವಾಸಸ್ಥಾನಕ್ಕೆ ಹೋಗುವಂತೆ ಕೇಳಿಕೊಂಡ ಇದು ಕೊಳಕ್ಕೆ ಹಿಂತಿರುಗಿದೆ’ ಎಂದು ದೇವಾಲಯದ ಅಧಿಕಾರಿ ಚಂದ್ರಶೇಖರನ್ ಹೆಚ್.ಟಿ. ಹೇಳಿದ್ದಾರೆ.

     ಈ ದೇವಸ್ಥಾನ ಕೆರೆಯ ಮಧ್ಯದದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ಕೆರೆಯ ಮಧ್ಯೆ ನಿಂತಿರುವುದರಿಂದ ಈ ದೇಗುಲದ ಸೌಂದರ್ಯ ಹಾಗೂ ಇಲ್ಲಿಯ ವಾತಾವರಣದಿಂದಾಗಿ ಇದು ಪ್ರಸಿದ್ಧಿ ಪಡೆದಿದೆ.

     ಬಬಿಯಾನನ್ನ ದೇವರ ಮೊಸಳೆ ಎಂದೇ ಸ್ಥಳೀಯರು ನಂಬಿದ್ದಾರೆ. ಈ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ನೀಡೋದ್ರ ಜೊತೆಗೆ ಬಬಿಯಾಗೂ ನಿತ್ಯ ನೇವೈದ್ಯ ಸಮರ್ಪಣೆ ಮಾಡಲಾಗುತ್ತೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap