ಆರ್‌ಬಿಐ ನಿಂದ ಸಾಲದ ಮೇಲಿನ ರೆಪೋ ದರ ಇಳಿಕೆ!!!

ಮುಂಬಯಿ: 

      ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಶುಕ್ರವಾರ ಐದನೇ ಬಾರಿಗೆ ಬಡ್ಡಿ ದರದಲ್ಲಿ ಕಡಿತ ಮಾಡಲು ಮುಂದಾಗಿದೆ.

      ಈ ಮಹತ್ವದ ನಿರ್ಧಾರಕ್ಕೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿಯ ಆರು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

      ನಿರೀಕ್ಷೆಯಂತೆ ಆರ್ ಬಿಐ 5.15 ಶೇಕಡಾ ಅಂದರೆ 0.25ರಷ್ಟು ಬಡ್ಡಿ ದರ ಕಡಿತ ಮಾಡಿದೆ. ಅದೇ ರಿವರ್ಸ್ ರೆಪೋ ದರವನ್ನು ಶೇ.4.9ಕ್ಕೆ ಇಳಿಸಿದ್ದು, ರೆಪೋ ದರವನ್ನು ಶೇ.5.40ರಿಂದ 5.15ಕ್ಕೆ ಇಳಿಸಲಾಗಿದೆ. ರಿವರ್ಸ್ ರೆಪೋ ರೇಟ್ ನ್ನು 4.90ಕ್ಕೆ ಸರಿದೂಗಿಸಲಾಗಿದೆ ಮತ್ತು ಬ್ಯಾಂಕ್ ರೇಟ್ ನ್ನು ಶೇ.5.40ರಲ್ಲಿಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.

     ಈ ಮೂಲಕ ರಾಷ್ಟ್ರದಲ್ಲಿ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಮತ್ತೆ ಪ್ರಗತಿಯ ಹಳಿಗೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ 5ನೇ ಬಾರಿ ಮತ್ತೆ ರೆಪೋ ದರವನ್ನು ಇಳಿಕೆ ಮಾಡಲು ಮುಂದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap