ಮುಂದುವರಿದ ಹುಚ್ಚಾ ವೆಂಕಟ್ ಹುಚ್ಚಾಟ..!

ಬೆಂಗಳೂರು

   ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್‌ನ ಹುಚ್ಚಾಟ ಮುಂದುವರಿದಿದ್ದು ಮಡಿಕೇರಿಯಲ್ಲಿ ಕಾರಿಗೆ ಹಾನಿ ಮಾಡಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಅವರು ಈಗ ದೊಡ್ಡಬಳ್ಳಾಪುರದಲ್ಲಿ ತಮ್ಮ ಹುಚ್ಚಾಟ ಮುಂದುವರಿಸಿದ್ದಾರೆ. ದೊಡ್ಡಬಳ್ಳಾಪುರದ ಟೋಲ್ ಗೇಟ್ ಬಳಿ ಯುವತಿಯೊಬ್ಬಳ್ಳನ್ನು ಅಡ್ಡಗಟ್ಟಿ, ಮದುವೆಯಾಗುವಂತೆ ಪೀಡಿಸಿದ್ದಾರೆ.ಶುಕ್ರವಾರ ದೊಡ್ಡಬಳ್ಳಾಪುರದ ಟೋಲ್ ಬಳಿ ಕಾಣಿಸಿಕೊಂಡ ಹುಚ್ಚ ವೆಂಕಟ್, ಮೊದಲಿಗೆ ಟೋಲ್ ಬಳಿ ನಿಲಿಸಿದ್ದ ತಮ್ಮ ಕೆಂಪು ಕಾರನ್ನು ಜಖಂಗೊಳಿಸಿದ್ದಾರೆ.

    ಡಿಚ್ಚಿ ಹೊಡೆದು ಕಾರು ಜಖಂಗೊಳಿಸುವ ಪ್ರಯತ್ನ ವಿಫಲವಾದ ಬಳಿಕ ಅನತಿ ದೂರದಲ್ಲಿ ಬಿದ್ದಿದ್ದ ದೊಡ್ಡ ಕಲ್ಲನ್ನು ತಂದು ಕಾರಿನ ಗಾಜನ್ನು ಪುಡಿ, ಪುಡಿ ಮಾಡಿದ್ದಾರೆ.ಆನಂತರ ಟೋಲ್? ಬಳಿಗೆ ತೆರಳುವ ಅವರು ಅಲ್ಲಿ ಕೆಲಸದ ನಿಮಿತ್ತ ಎಲ್ಲಿಗೋ ಹೋಗಲು ಬಂದ ಯುವತಿಯನ್ನು ಮದುವೆಯಾಗುವಂತೆ ಪೀಡಿಸಿದ್ದಾರೆ.

    ಪೊಲೀಸರಿಗೆ ದೂರು ಕೊಟ್ಟರೂ, ಅದಾವುದನ್ನೂ ಲೆಕ್ಕಿಸದೆ ಆಕೆಯನ್ನು ಪೀಡಿಸುವುದನ್ನು ಮುಂದುವರಿಸಿದ್ದಾರೆ. ಇವರಿಂದ ತಪ್ಪಿಸಿಕೊಂಡು ಹೋಗಲು ಯುವತಿ ಯತ್ನಿಸಿದಾಗ ಆಕೆಯ ಕೈ ಹಿಡಿದು ಎಳೆದಾಡಿದ್ದಾರೆ ಸ್ಥಳಕ್ಕೆ ಪೊಲೀಸರು ಧಾವಿಸಿ ವೆಂಕಟ್‌ಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link