ನವದೆಹಲಿ:
ಪಾಕಿಸ್ತಾನ ಜೊತೆಗೆ ಫೆ.27ರಂದು ನಡೆದ ವೈಮಾನಿಕ ದಾಳಿ ವೇಳೆ ಆಕಸ್ಮಿಕವಾಗಿ ನಮ್ಮದೇ ದೇಶದ ಎಮ್ ಐ 17 ಹೆಲಿಕಾಪ್ಟರ್’ನ್ನು ನಮ್ಮದೇ ಕ್ಷಿಪಣಿಯು ಹೊಡೆದುರುಳಿಸಿದ್ದು ಇದು ನಾವು ಮಾಡಿದ ದೊಡ್ಡ ತಪ್ಪು ಎಂದು ಭಾರತೀಯ ವಾಯುಪಡೆ ಇಂದು ಹೇಳಿದೆ.
ಫೆಬ್ರವರಿ ತಿಂಗಳಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವೈಮಾನಿಕ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತೀಯ ಹೆಲಿಕಾಪ್ಟರ್ ಪತನಗೊಂಡಿದ್ದು. ಹೆಲಿಕಾಪ್ಟರ್ ಪತನಗೊಂಡಿದ್ದರ ಹಿಂದೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿದ್ದವು. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತವಾಗಿರಬಹುದು ಅಥವಾ ಪಾಕಿಸ್ತಾನದ ಕ್ಷಿಪಣಿ ದಾಳಿಯಲ್ಲಿ ಪತನವಾಗಿರಬಹುದು ಎಂದು ಹೇಳಲಾಗುತ್ತಿತ್ತು.ಆದರೆ ಇದೀಗ ಹೆಲಿಕಾಪ್ಟರ್ ಪತನಗೊಂಡಿದ್ದರ ರಹಸ್ಯ ಬಹಿರಂಗಗೊಂಡಿದೆ.
ಹೆಲಿಕಾಪ್ಟರ್’ನ್ನು ನಮ್ಮದೇ ಕ್ಷಿಪಣಿಯು ತಪ್ಪಾಗಿ ಗ್ರಹಿಸಿ ಹೊಡೆದುರುಳಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಈಗಾಗಲೇ ನಾವು ಕ್ರಮ ಕೈಗೊಂಡಿದ್ದೇವೆ. ಇದು ನಮ್ಮ ದೊಡ್ಡ ತಪ್ಪು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಂತಹ ತಪ್ಪುಗಳು ಭವಿಷ್ಯದಲ್ಲಿ ಎಂದೂ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭಡೂರಿಯಾ ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/Rakesh-Bhadauria.gif)