ಬೆಂಗಳೂರು :
ಕರ್ನಾಟಕ ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ರಿಸರ್ವ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ.
ಈ ಕುರಿತಂತೆ ನೇಮಕಾತಿ ಜರೂರು ಪ್ರಕಟಣೆ ನೀಡಿರುವ ಕರ್ನಾಟಕ ಪೊಲೀಸ್ ಇಲಾಖೆ, ಕರ್ನಾಟಕ ಪೊಲೀಸ್ ಇಲಾಖೆಯ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಖಾಲಿ ಇದ್ದಂತ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ( ಸಿ ಎ ಆರ್ – ಡಿ ಎ ಆರ್ ) ಹುದ್ದೆಗಳಿಗೆ ಇತ್ತೀಚೆಗೆ ಅರ್ಜಿ ಕರೆಯಲಾಗಿತ್ತು. ಇಂತಹ ಹುದ್ದೆಗಳ ಆಯ್ಕೆಗಾಗಿ ದಿನಾಂಕ 12-01-2020ರಂದು ನಿಗದಿ ಪಡಿಸಲಾಗಿದ್ದ ಲಿಖಿತ ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದ್ದು, ಸದರಿ ಲಿಖಿತ ಪರೀಕ್ಷೆಯನ್ನು 19-01-2020 ರಂದು ಪತ್ರಿಕೆ-1 ಅನ್ನು ಬೆಳಿಗ್ಗೆ 10 ಗಂಟೆಯಿಂದ 11.30ರವರೆಗೆ, ಪತ್ರಿಕೆ-2 ಅನ್ನು ಮಧ್ಯಾಹ್ನ 1 ಗಂಟೆಯಿಂದ 2.30ರ ವರೆಗೆ ನಡೆಸಲು ಎಡಿಜಿಪಿ ನೇಮಕಾತಿ ರವರು ದಿನಾಂಕವನ್ನು ನಿಗದಿ ಪಡಿಸಿರುತ್ತಾರೆ ಎಂಬುದಾಗಿ ತಿಳಿಸಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಉದ್ಯೋಗಾಕಾಂಕ್ಷಿಗಳು ದಿನಾಂಕ 12-01-2020ರಂದು ನಿಗದಿ ಪಡಿಸಲಾಗಿದ್ದ ಲಿಖಿತ ಪರೀಕ್ಷೆ ಅಂದು ಅಲ್ಲ. ಬದಲಾಗಿ ದಿನಾಂಕ 19-01-2020 ರಂದು ಎಂಬುದಾಗಿ ಗಮನಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
