ಮೈಸೂರು :
ಸೆ. 21 ರಿಂದ ಶಾಲೆ ತೆರೆಯಲಿದ್ದು, ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ , ಸೆ. 21 ರಿಂದ ಶಾಲೆ ಆರಂಭವಾಗಲಿದ್ದು, ತರಗತಿ ಆರಂಭ ಆಗಲ್ಲ. ಸೆ. 21 ರಿಂದ ಕೇವಲ ಶಾಲೆ ತೆರೆಯಲಿದ್ದು, ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಸೆ. 30 ರೊಳಗೆ ಪ್ರವೇಶಾತಿ ಪ್ರಕ್ರಿಯೆ ಮುಗಿಸಬೇಕು 1-10 ನೇತರಗತಿ ಪ್ರವೇಶ ನಡೆಯಲಿದ್ದು, ಒಂದು ಟರ್ಮ್ ಫಿಸ್ ಮಾತ್ರ ಪಡೆಯಬೇಕು, ಈ ಮೂಲಕ ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಮ್ಮೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಏನೇ ಸಮಸ್ಯೆ ಆದರೂ ಬಿಇಒ ಸಂಪರ್ಕಿಸಿ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
