ಹಾಲ್ ಟಿಕೆಟ್ ನೀಡದ್ದಕ್ಕೆ SSLC ವಿದ್ಯಾರ್ಥಿ ಆತ್ಮಹತ್ಯೆ!!!

0
97

ಬೆಂಗಳೂರು: 

      ಶಾಲೆಯಲ್ಲಿ SSLC ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡಲು ನಿರಾಕರಿಸಿದ ಕಾರಣದಿಂದಾಗಿ ಮನನೊಂದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ವರದಿಯಾಗಿದೆ.

      ನಾಗವಾರ ಪಾಳ್ಯ ನಿವಾಸಿ ಜನಾರ್ದನ್​ (15) ಮೃತ ಬಾಲಕ. ಈತನ ಹಾಜರಾತಿ ಕಡಿಮೆ ಇದ್ದ ಕಾರಣದಿಂದ ಹಾಲ್​ ಟಿಕೆಟ್​ ನೀಡಲು ಶಾಲಾ ಸಿಬ್ಬಂದಿ ನಿರಾಕರಿಸಿದ್ದರು ಎನ್ನಲಾಗಿದೆ. 

      ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಜನಾರ್ದನ್​ ಮನೆಯಲ್ಲಿಯೇ ನಿನ್ನೆ ವಿಷ ಸೇವನೆ ಮಾಡಿದ್ದಾನೆ. ನಂತರ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here