ಶಿವಮೊಗ್ಗ :
ಖಾಸಗಿ ಬಸ್ಸೊಂದು ಟಾಟಾ ಏಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ನದಿ ಸೇತುವೆ ಬಳಿ ನಡೆದಿದೆ.
ಶಿಕಾರಿಪುರ ಪಟ್ಟಣದ ಜಯನಗರ ಬಡಾವಣೆಯ ಚಂದ್ರಕಲಾ (40), ಲಕ್ಷ್ಮೀ (40), ರೇಖಾ (45) ಮೃತಪಟ್ಟಿರುವ ದುರ್ದೈವಿಗಳು.
ಶಿಕಾರಿಪುರದಿಂದ ಕೊಪ್ಪದ ಕೆರೆಗೆ ಟಾಟಾ ಏಸ್ನಲ್ಲಿ ಮಹಿಳೆಯರು ಪೂಜೆಗೆ ತೆರಳುತ್ತಿದ್ದರು. ಶಿಕಾರಿಪುರ ಪಟ್ಟಣ ಹೊರವಲಯದ ಕುಮದ್ವತಿ ನದಿ ಸೇತುವೆ ಮೇಲೆ ಟಾಟಾ ಏಸ್ ವಾಹನಕ್ಕೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
