ಮಡಿಕೇರಿ : ‘ಗೋಲ್ಡನ್ ಟೆಂಪಲ್’ಗೆ ಡಿ.26 ರವರೆಗೆ ಪ್ರವಾಸಿಗರ ಭೇಟಿ ನಿಷೇಧ!!

ಮಡಿಕೇರಿ : 

      ಕೊಡಗಿನ ಕುಶಾಲನಗರ ಸಮೀಪದ ಬೈಲುಕೊಪ್ಪದಲ್ಲಿರುವ ಪ್ರವಾಸಿ ತಾಣ ಗೋಲ್ಡನ್ ಟೆಂಪಲ್ ಗೆ ಪ್ರವಾಸಿಗರ ಪ್ರವೇಶವನ್ನು ಡಿ.26 ರವರೆಗೆ  ನಿಷೇಧಿಸಲಾಗಿದೆ.

      ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಗೋಲ್ಡನ್ ಟೆಂಪಲ್’ ಡಿ.26 ರವರೆಗೆ ಬಂದ್ ಆಗಲಿದೆ. ಸದ್ಯಕ್ಕೆ ಪ್ರವಾಸಿಗರು ಬಾರದಂತೆ ಮನವಿ ಮಾಡಲಾಗಿದೆ ಎಂದು ಟಿಬೆಟಿಯನ್ ನಿರಾಶ್ರಿತರ ಶಿಬಿರದ ಆಡಳಿತ ಮಂಡಳಿ ತಿಳಿಸಿದೆ.

      ದೇವಾಲಯಕ್ಕೆ ದೇಶ, ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿರುವ ಹಿನ್ನೆಲೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap