ಬೆಂಗಳೂರು :
ಈ ಹಿಂದೆ ಅಪಹರಣ ಪ್ರಕರಣದಲ್ಲಿ ಸಿಲುಕಿದ್ದ ಸುನಾಮಿ ಕಿಟ್ಟಿ, ಆನಂತರ ಪಬ್ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇದೀಗ ಸುನಾಮಿ ಕಿಟ್ಟಿ ಮತ್ತೊಂದು ಕಿರಿಕ್ ಮಾಡಿಕೊಂಡಿರುವ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.
‘ಬಿಗ್ ಬಾಸ್’ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಆ ಬಳಿಕ ತಮ್ಮ ಕಿರಿಕ್ ಗಳಿಂದಲೇ ಕುಖ್ಯಾತಿ ಗಳಿಸುತ್ತಿದ್ದಾರೆ.
ಕಿಟ್ಟಿ ಕಿರಿಕ್ :
ಸುನಾಮಿ ಕಿಟ್ಟಿ ನಗರದ ಶಂಕರ ಮಠದಲ್ಲಿರುವ ಮನೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇತ್ತೀಚಿಗೆ ಬಾಡಿಗೆ ಹಣವನ್ನು ನೀಡುತ್ತಿರಲಿಲ್ಲ. ಹೀಗಾಗಿ ಮನೆ ಮಾಲೀಕ ಶಿವಣ್ಣ ಬಾಡಿಗೆ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಕಿಟ್ಟಿ ಮನೆ ಮಾಲೀಕ ಶಿವಣ್ಣ ಅವರಿಗೆ ಅವಾಜ್ ಹಾಕಿದ್ದಾನೆ.
ಸುನಾಮಿ ಕಿಟ್ಟಿ ಶಿವಣ್ಣ ಅವರ ಮನೆಯಲ್ಲಿ ತಿಂಗಳಿಗೆ 22 ಸಾವಿರದಂತೆ ವಾಸವಾಗಿದ್ದನ್ನು. ಆದರೆ 4 ತಿಂಗಳಿನಿಂದ ಬಾಡಿಗೆ ಕೊಡದೇ ಸತಾಯಿಸುತ್ತಿದ್ದ. ಹೀಗಾಗಿ ಹಣವನ್ನು ಮನೆ ಮಾಲೀಕ ಕೇಳಿದಾಗ ಕಿಟ್ಟಿ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ. ಘಟನೆ ಸಂಬಂಧ ಕಿಟ್ಟಿ ವಿರುದ್ಧ ಮಾಲೀಕ ಶಿವಣ್ಣ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸುನಾಮಿ ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
