ತುಮಕೂರು:
ತುಮಕೂರು ಸಿದ್ದಗಂಗಾಮಠದ ಡಾ.ಶಿವಕುಮಾರ್ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುರ್ತು ಸಭೆ ನಡೆಸಲಿದ್ದಾರೆ.
ಸಿಎಂ ಕುಮಾರಸ್ವಾಮಿ ಮಠದ ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳು, ಕಿರಿಯ ಸ್ವಾಮೀಜಿ ಸಿದ್ಧಲಿಂಗ ಶ್ರೀಗಳು, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂಬಿ ಪಾಟೀಲ್, ಬಿಎಸ್ ಯಡಿಯೂರಪ್ಪ, ವಿ.ಸೋಮಣ್ಣ ಅವರು ಮಾತುಕಥೆ ನಡೆಸುವವರಿದ್ದಾರೆ.
ಸದ್ಯ ಶ್ರೀಗಳ ಸ್ಥಿತಿಗತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಭೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ. ಸದ್ಯಕ್ಕೆ ಮಠದ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ