ಮಠದಲ್ಲಿ ಇಷ್ಟಲಿಂಗ ಪೂಜೆ ನೇರವೇರಿಸಿದ ಶ್ರೀಗಳು

ತುಮಕೂರು: 

      13 ದಿನಗಳಿಂದ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದ ಸಿದ್ದಗಂಗಾ ಶ್ರೀಗಳು ಇಂದು ವಿಶ್ರಾಂತಿಯಿಂದ ಎದ್ದು ಇಷ್ಟಲಿಂಗ ಪೂಜೆ ನೇರವೇರಿಸಿದ್ದಾರೆ.

      ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅವರು ಮೊದಲಿನ ತರ ಊಟ, ಪೂಜೆ ಮಾಡುತ್ತಿದ್ದಾರೆ. ಎಂದಿನಂತೆ ತಮ್ಮ ನಿತ್ಯದ ಕೆಲಸಗಳನ್ನು ಹಾಗೂ ಪೂಜೆಗಳನ್ನು ಮುಗಿಸಿದ್ದಾರೆ.

      ಇಂದು ಮುಂಜಾನೆಯೇ ವಿಶ್ರಾಂತಿಯಿಂದ ಇದ್ದ ಶ್ರೀಗಳು ಸ್ನಾನ ಮುಗಿಸಿ ಬಳಿಕ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಎಂದಿನಂತೆ ಶ್ರೀಗಳು ಇಡ್ಲಿ, ಹಣ್ಣು ಹಂಪಲನ್ನು ಸೇವಿಸಿದ್ದು, ಸಿದ್ದಗಂಗಾ ಆಸ್ಪತ್ರೆ ವೈದ್ಯರು ಶ್ರಿಗಳ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap