ಕನ್ನಡ ಚಿತ್ರರಂಗದಲ್ಲಿ ನಟ ಸಾರ್ವಭೌಮ ರಾಜ್ ಕುಮಾರ್, ಅಭಿನಯ ಭಾರ್ಗವ ವಿಷ್ಣುವರ್ಧನ್ ಕಣ್ಮರೆಯಾಗಿ ವರುಷಗಳೇ ಉರುಳಿವೆ. ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ರವರೂ ಕೂಡ ವಿಧಿವಶರಾಗಿದ್ದಾರೆ. ಕನ್ನಡದ ಈ ಮೂವರು ಮಾಣಿಕ್ಯಗಳನ್ನು ಕಳೆದುಕೊಂಡು ಚಿತ್ರರಂಗ ಅಪಾರ ನೋವನ್ನು ಅನುಭವಿಸಿದೆ.
https://m.facebook.com/story.php?story_fbid=2720691521489853&id=100006470947429
ಈ ನೋವಿನ ಸಂಗತಿಯಲ್ಲಿ ಕಂಬನಿ ಮಿಡಿಯುವ ಬದಲು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೀನಾಯವಾಗಿ ಕನ್ನಡದ ಮೂವರು ದಿಗ್ಗಜರನ್ನು ತೆಗಳುವ ರೀತಿ ಹೇಳಿಕೆಯನ್ನು ಬರೆದು, “RIP 3 IDIOTS” ಎಂಬ ತಲೆಬರಹದಡಿ ಅವಮಾನ ಮಾಡುವ ಹಾಗೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಹಿಂದೆ ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾದಾಗಲೂ “ಮಂಗಳೂರು ಮುಸ್ಲಿಂಸ್” ಎಂಬ ಫೇಸ್ ಬುಕ್ ಪೇಜ್, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅನಂತ್ ಕುಮಾರ್ ಅವರ ಬಗ್ಗೆ ಅತಿ ಕೆಟ್ಟದಾಗಿ ಬರೆಯುವ ಮೂಲಕ ತಮ್ಮ ಬುದ್ಧಿ ತೋರಿಸಿದೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾದಂತಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಅಗತ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
