ಹುಳಿಯಾರು :
ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದಂತೆ ಪಟ್ಟಣದಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಬಿಸಿಲ ಬೇಗೆ ತಣಿಸಲು ಸ್ಥಳೀಯರು ಹಣ್ಣು ಹಾಗೂ ತಂಪು ಪಾನೀಯಗಳ ಮಾರಾಟದ ಅಂಗಡಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ
ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆ ಬದಿಗಳಲ್ಲಿ ಕಲ್ಲಂಗಡಿ ಹಣ್ಣಿನ ಮಾರಾಟದ ಅಂಗಡಿಗಳು ತಲೆ ಎತ್ತಿವೆ. ಹತ್ತದಿನೈದು ದಿನಗಳಿಂದ ಕಲ್ಲಂಗಡಿ ಹಣ್ಣಿನ ಮಾರಾಟದ ಅಂಗಡಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿದೆ.
ಪ್ರತಿ ದಿನ ಬಿಸಿಲ ಝಳ ಹೆಚ್ಚಾದ ತಕ್ಷಣ ಕಲ್ಲಂಗಡಿ ಹಣ್ಣು ತಿನ್ನಲು ಗ್ರಾಹಕರು ಅಂಗಡಿಗಳತ್ತ ಮುಗಿ ಬೀಳುತ್ತಿದ್ದಾರೆ. ಅಲ್ಲದೆ ನೇರವಾಗಿ ರೈತರೇ ಟ್ರ್ಯಾಕ್ಟರ್‍ಗಳಲ್ಲಿ ಮಾರುತ್ತಿರುವ ಕಲ್ಲಂಗಡಿ ಖರೀದಿಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ.
ರೈತರು ಪ್ರತಿ ಕೆಜಿಗೆ 10 ರೂಪಾಯಿಯಂತೆ ಮಾರುತ್ತಿರುವುದು ಗ್ರಾಹಕರನ್ನು ಸೆಳೆಯುತ್ತಿದೆ. ಒಟ್ಟಾರೆ ಕೋವಿಡ್ ಲಾಕ್ ಡೌನ್ ನಿಂದ ನಷ್ಟ ಅನುಭವಿಸಿದ್ದ ಕಲ್ಲಂಗಡಿ ಬೆಳೆಗಾರರು ಹಾಗೂ ಕಲ್ಲಂಗಡಿ ವ್ಯಾಪಾರಿಗಳು ಉತ್ತಮ ವ್ಯಾಪಾರದಿಂದ ಸಂತಸಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
