ಬೆಂಗಳೂರು:
ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ.
ರಾಧಿಕಾ ಪಂಡಿತ್ ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಡಿಸೆಂಬರ್ 9, 2016ರಂದು ಹಸೆಮಣೆ ಏರಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಆಯ್ರಾ ಎಂಬ 10 ತಿಂಗಳ ಹೆಣ್ಣು ಮಗುವಿದೆ. ಇದೀಗ ಎರಡನೇ ಮಗುವಿನ ಆಗಮನ ಕುಟುಂಬದಲ್ಲಿ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ