ಬೆಂಗಳೂರು :
ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕನೊಬ್ಬ ಸಾವನಪ್ಪಿದ ಘಟನೆ ಬೆಂಗಳೂರಿನ ಶಾಂತಿನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಂದನೂರು ಚಿಂತನ್(26)ಮೃತಪಟ್ಟ ಯುವಕ. ಮೆಜಿಸ್ಟಿಕ್ ತೆರಳಬೇಕಿದ್ದ ಮೃತ ಚಿಂತನ್ ಶಿವಾಜಿ ನಗರಕ್ಕೆ ಹೋಗುತ್ತಿದ್ದ ಬಸ್ ಹತ್ತಿ, ಬಳಿಕ ಓಪನ್ ಇದ್ದ ಡೋರ್ ಇಳಿಯಲು ಹೋದಾಗ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಬಿಎಂಟಿಸಿ ಬಸ್ ನ ಚಕ್ರಕ್ಕೆ ಸಿಲುಕಿ ಸಾವನಪ್ಪಿದ್ದಾನೆ.
ಚಾಲಕ ಬಾಗಿಲು ಕ್ಲೋಸ್ ಮಾಡದ ಕಾರಣ ಈ ಘಟನೆ ನಡೆದ ಹಿನ್ನಲೆಯಲ್ಲಿ ಚಾಲಕನ ಮೇಲೆ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
