ಲಕ್ನೋ:
ಯೂ ಟ್ಯೂಬ್‌ನಲ್ಲಿ ಮಗು ಪ್ರಸವದ ವೀಡಿಯೊವನ್ನು ವೀಕ್ಷಿಸುತ್ತಾ, ತಾನೂ ಒಂಟಿಯಾಗಿ ಮಗುವಿಗೆ ಜನ್ಮ ನೀಡಲು ಪ್ರಯತ್ನಿಸಿದ 26ರ ಹರೆಯದ ಅವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ವರದಿಯಾಗಿದೆ.
ಬಾಡಿಗೆ ಮನೆಯಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ ಮಹಿಳೆ ಹಾಗೂ ನವಜಾತ ಗಂಡು ಶಿಶು ಇಬ್ಬರೂ ಮೃತಪಟ್ಟಿದ್ದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೂಲತಃ ಬಹ್ರಾಯ್ಚ್ ನಿವಾಸಿಯಾಗಿರುವ ಈಕೆ ಗೋರಖ್‌ಪುರದಲ್ಲಿ ನಾಲ್ಕುವರ್ಷದಿಂದ ವಾಸವಾಗಿದ್ದಳು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸಿದ್ದಳು. ಈಗ ನಾಲ್ಕು ದಿನಗಳ ಹಿಂದೆ ಬಿಲಂದ್ಪುರ ಏರಿಯಾದ ಬಾಡಿಗೆ ರೂಂಗೆ ಬಂದಿದ್ದಳು. ಭಾನುವಾರ ಆಕೆಯ ಕೋಣೆಯಿಂದ ರಕ್ತ ಹರಿದು ಬರುತ್ತಿರುವುದನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಡಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ಒಳಗೆ ಹೋದಾಗ ಮಹಿಳೆ ಮತ್ತು ಆಕೆಯ ಮಗು ರಕ್ತದ ಮಡುವಿನಲ್ಲಿ ಬಿದ್ದ ದೃಶ್ಯ ಕಂಡು ಬಂದಿದೆ. ಪೊಲೀಸರು ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.
“ಸ್ವತಃ ಮಗುವನ್ನು ಪ್ರಸವಿಸುವುದು ಹೇಗೆಂಬ ವಿಡಿಯೋ, ಅದೇ ರೀತಿಯ ಇತರ ಸುರಕ್ಷಿತ ಹೆರಿಗೆಯ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ವೀಕ್ಷಿಸಿರುವ ವಿಚಾರ ಆಕೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಮೂಲಕ ಗೊತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
