ಬೆಂಗಳೂರು :
ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ದರ್ಶನ್ನ ಮಗ ಎಂದು ಸುಮಲತಾ ಪರಿಗಣಿಸಿದ್ದರು. ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ‘ಅವನು ಯಾವಾಗಲೂ ನನ್ನ ಮಗ’ ಎಂದಿದ್ದರು. ಆದರೆ, ಇತ್ತೀಚಿಗಿನ ಬೆಳವಣಿಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇಬ್ಬರ ಮಧ್ಯೆ ಯಾವುದೂ ಸರಿ ಇಲ್ಲವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ಉತ್ತರ.
ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ಈಗ ಅವರು ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಅವರು ಯಾರನ್ನು ಫಾಲೋ ಮಾಡದೇ ಇರೋದು ಹಲವು ಪ್ರಶ್ನೆ ಹುಟ್ಟಿ ಹಾಕಿದೆ .
ದರ್ಶನ್ ಜೈಲಿನಲ್ಲಿ ಇದ್ದಾಗ ಸುಮಲತಾ ಅವರು ಅವರನ್ನು ನೋಡಲು ಹೋಗಿಲ್ಲ. ರಾಜಕೀಯ ಕಾರಣಗಳಿಂದ ಅವರು ಹೀಗೆ ಮಾಡದೆ ಇರಬಹುದು. ಇದು ದರ್ಶನ್ ಮನಸ್ಸಿಗೆ ನಾಟಿದೆಯೇ ಎನ್ನುವ ಪ್ರಶ್ನೆ ಉಂಟುಮಾಡಿದೆ. ಸುಮಲತಾ ತಮ್ಮನ್ನು ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ವೈಮನಸ್ಸು ಮೂಡಿತೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
