ಕಾಂಗ್ರೆಸ್‌ ಗೆ ಸ್ವಪ್ಲ ರಿಲೀಫ್‌ ನೀಡಿದ ಸುಪ್ರೀಂ…!

ನವದೆಹಲಿ:

      ಲೋಕಸಭೆ ಚುನಾವಣೆ ಮುಗಿಯುವವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ (ಐಎನ್‌ಸಿ) 3,500 ಕೋಟಿ ರೂಪಾಯಿ ವಸೂಲಿ ಮಾಡಲು ಆದಾಯ ತೆರಿಗೆ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ಇಲಾಖೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮೆಹ್ತಾ ಒತ್ತಿ ಹೇಳಿದರು.

     ನ್ಯಾಯಮೂರ್ತಿ ಬಿ. ವಿ. ನಾಗರತ್ನ ನೇತೃತ್ವದ ಪೀಠವು ಆದಾಯ ತೆರಿಗೆ ಇಲಾಖೆಯಿಂದ 3,500 ಕೋಟಿ ರೂಪಾಯಿಗಳ ಡಿಮ್ಯಾಂಡ್​ ನೋಟಿಸ್​ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ಕುರಿತು ವಿಚಾರಣೆ ನಡೆಸಿತು.

   ಆದಾಯ ತೆರಿಗೆ ಇಲಾಖೆ ಪ್ರತಿನಿಧಿಸಿದ ಮೆಹ್ತಾ ಅವರು, ”ಅಂದಾಜು 3,500 ಕೋಟಿ ರೂ.ಗಳ ಬೇಡಿಕೆ ಇದೆ. ಮತ್ತು ಚುನಾವಣೆ ಮುಗಿಯುವವರೆಗೆ ಆದಾಯ ಇಲಾಖೆಯು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ” ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು, ನ್ಯಾಯಾಲಯವು ಮೆಹ್ತಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು” ಎಂದು

   ಮಾರ್ಚ್‌ನಲ್ಲಿ ಹಲವಾರು ಬೇಡಿಕೆಗಳಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷವು ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದೆ. ಮತ್ತು ವಿಚಾರಣೆಯ ಆರಂಭದಲ್ಲಿ ಮೆಹ್ತಾ ಅವರು, ಮಾರ್ಚ್ 2024 ರಲ್ಲಿ ವಿವಿಧ ದಿನಾಂಕಗಳಿಗೆ ಸುಮಾರು 3,500 ಕೋಟಿ ರೂ.ಗಳಿಗೆ ಡಿಮ್ಯಾಂಡ್​ ನೋಟಿಸ್​ ನೀಡಿರುವುದಕ್ಕೆ ಯಾವುದೇ ವಿವಾದವಿಲ್ಲ ಎಂದು ಸಲ್ಲಿಸಿದ ಆದೇಶ ಪ್ರತಿಯಲ್ಲಿ ದಾಖಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

  ಐಟಿ ಇಲಾಖೆಯು ಈ ವಿಚಾರ ಕುರಿತು ಚುರುಕುಗೊಳಿಸಲು ಬಯಸುವುದಿಲ್ಲ ಮತ್ತು ಸುಮಾರು 3,500 ಕೋಟಿ ರೂ.ಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪೀಠವು ಗಮನಿಸಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈನಲ್ಲಿ ನಿಗದಿ ಪಡಿಸಿದೆ

Recent Articles

spot_img

Related Stories

Share via
Copy link
Powered by Social Snap