ಕಿವೀಸ್ ವಿರುದ್ಧ ಭಾರತಕ್ಕೆ ಸರಣಿ ಗೆಲುವು!!

0
59

ನ್ಯೂಜಿಲೆಂಡ್:

      ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 7 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿ, ಸರಣಿ ಗೆಲುವಿನ ಕಿರೀಟವನ್ನೂ  ಮುಡಿಗೇರಿಸಿಕೊಂಡಿದೆ.

      ನ್ಯೂಜಿಲೆಂಡ್ ನೀಡಿದ್ದ 244 ರನ್​ಗಳ ಗುರಿ ಬೆನ್ನಟ್ಟಿದ್ದ ಕೊಹ್ಲಿ ಪಡೆ, ಇನ್ನು 7 ಓವರ್​ ಉಳಿದಿರುವಂತೆಯೇ ಗುರಿ ತಲುಪಿತು. 

      ನಾಯಕ ವಿರಾಟ್‌ ಕೊಹ್ಲಿ ಮತ್ತು ರೋಹಿತ ಶರ್ಮ ಅವರ ಭರ್ಜರಿ ಅರ್ಧ ಶತಕ ಮತ್ತು ಮೊಹಮ್ಮದ್‌ ಶಮಿ ಅವರ ಮಾರಕ ಬೌಲಿಂಗ್‌ ದಾಳಿಯಿಂದ ಕಿವೀಸ್‌ ವಿರುದ್ಧದ ಸರಣಿಯ 3ನೇ ಪಂದ್ಯವನ್ನು ಗೆದ್ದಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. 

      43 ಓವರುಗಳಲ್ಲಿ 3 ವಿಕೆಟುಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪುವ ಮೂಲಕ ಕಿವೀಸ್ ನೆಲದಲ್ಲಿ ತನ್ನ ಸಾರ್ವಕಾಲಿಕ ಗೆಲುವಿನ ಪ್ರದರ್ಶನವನ್ನು ಟೀಂ ಇಂಡಿಯಾ ದಾಖಲಿಸಿದೆ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here