ನವದೆಹಲಿ:
ಬೆರಿಲ್ ಚಂಡಮಾರುತದ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಸಿಲುಕಿದ್ದ ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರರು ಕೊನೆಗೂ ವಿಶೇಷ ಏರ್ ಇಂಡಿಯಾ ವಿಮಾನ ನಿಲ್ದಾಣದಲ್ಲಿ ತವರಿತ್ತ ಹೊರಟಿದ್ದಾರೆ.
ಕೈಯಲ್ಲಿ ಟ್ರೋಫಿ ಹಿಡಿದು ವಿಮಾನದಲ್ಲಿ ನಿಂತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ನಾಯಕ ರೋಹಿತ್ ಶರ್ಮಾ, ಇದು ತವರಿಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಟೀಂ ಇಂಡಿಯಾ ಗುರುವಾರ ಬೆಳಗ್ಗೆ ದೆಹಲಿಗೆ ಬಂದಿಳಿಯುವ ನಿರೀಕ್ಷೆಯಿದೆ.
ಬಿಸಿಸಿಐ ಕೂಡಾ T20 ವಿಶ್ವಕಪ್ ಟ್ರೋಫಿಯ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ‘ಇದು ಮನೆಗೆ ಬರುತ್ತಿದೆ’ ಎಂದು ಟ್ವೀಟ್ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಅಮಿತ್ ಶಾ ಆಯೋಜಿಸಿರುವ ವಿಶೇಷ ವಿಮಾನ, ಪಂದ್ಯಾವಳಿಯನ್ನು ವರದಿ ಮಾಡಲು ಹೋದ ಭಾರತೀಯ ಮಾಧ್ಯಮದ ಸದಸ್ಯರನ್ನು ಸಹ ಕರೆತರಲಿದೆ. ಆಟಗಾರರು, ಸಹಾಯಕ ಸಿಬ್ಬಂದಿ, ಕುಟುಂಬಗಳು ಮತ್ತು ಬಿಸಿಸಿಐ ಅಧಿಕಾರಿಗಳು ಸೇರಿದಂತೆ ಸುಮಾರು 70 ಜನರು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿದ್ದಾರೆ.
ಸ್ಪೋರ್ಟ್ಸ್ ಟಾಕ್ ಪ್ರಕಾರ, ವಿಶ್ವ ಚಾಂಪಿಯನ್ ಭಾರತೀಯ ಆಟಗಾರರು ಜುಲೈ 4 ರ ಗುರುವಾರ ಬೆಳಿಗ್ಗೆ 5 ಗಂಟೆಗೆ ನವದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಂಭ್ರಮಾಚರಣೆ ಕಾರ್ಯಕ್ರಮ ಯೋಜಿಸಲಾಗಿದೆ, ಆದರೆ ವೇಳಾಪಟ್ಟಿಯನ್ನು ನಿರ್ಧರಿಸಲಾಗಿಲ್ಲ.