ರಸ್ತೆ ಅಪಘಾತಕ್ಕೆ ತೆಲುಗು ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಗಾಯತ್ರಿ ಬಲಿ!

ಹೈದರಾಬಾದ್:

 ದಕ್ಷಿಣ ಭಾರತದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ ಗಾಯತ್ರಿ ಅಲಿಯಾಸ್ ಡಾಲಿ ಡಿಕ್ರೂಜ್ ರಸ್ತೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ಗಾಯತ್ರಿ ಮಾತ್ರವಲ್ಲ ಕಾರಿನಲ್ಲಿದ್ದ ರಾಥೋಡ್ ಮತ್ತು ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ.ಹೆಚ್ಚು ವೇಗದಲ್ಲಿ ಬಂದ ಕಾರಣವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಗಾಯಿತ್ರಿ ಅವರು ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯಲ್ಲಿಯೂ ಅಭಿನಯಿಸಿದ್ದರು. ಮಾರ್ಚ್ 18 ರ ರಾತ್ರಿ ಹೋಳಿ ಆಚರಣೆ ಮುಗಿಸಿ ಗೆಳೆಯ ರಾಥೋಡ್ ಜೊತೆ ತಮ್ಮ ಮನೆಗೆ ವಾಪಸಾಗುತ್ತಿದ್ದರು, ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದೆ.

ಬಂದೇ ಬಿಡ್ತು ತೂಫಾನ್​; ‘ಕೆಜಿಎಫ್​ ಚಾಪ್ಟರ್​ 2’ ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

ಅಪಘಾತದ ಸ್ಥಳದಲ್ಲೆ ನಟಿ ಸಾವನ್ನಪ್ಪಿದ್ದಾರೆ, ಆಕೆಯ ಸ್ನೇಹಿತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ, ಇನ್ನೂ ದುರಂತದಲ್ಲಿ 38 ವರ್ಷದ ಮತ್ತೊಬ್ಬ ಮಹಿಳೆ ಕೂಡ ಅಸು ನೀಗಿದ್ದಾರೆ. ರಸ್ತೆ ದಾಟುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link