ದಶ ಕೋಟಿಗಳನ್ನು ಮೀರಿದ ಹಾಲಿ-ಮಾಜಿ ಶಾಸಕರ ಸಂಪತ್ತು

ತುಮಕೂರು

     ನಾಮಪತ್ರ ಸಲ್ಲಿಕೆಗೆ ಇನ್ನೂ 2 ದಿನಗಳು ಬಾಕಿಯಿರುವಂತೆ ಘಟಾನುಘಟಿ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಸಲ್ಲಿಸಿದ್ದು, ಜಿಲ್ಲೆಯಲ್ಲಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರ ಸೇರಿ ಹಲವು ಪ್ರಮುಖರು ನಾಮಪತ್ರ ಸಲ್ಲಿಸಿ ಪ್ರಮಾಣಪತ್ರದಲ್ಲಿ ಆಸ್ತಿವಿವರವನ್ನು ಘೋಷಿಸಿಕೊಂಡಿದ್ದಾರೆ.

     ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳೆಲ್ಲರೂ ಕೋಟಿವೀರರೆ ಆಗಿದ್ದು, ಅವರ ಪತ್ನಿಯರ ಹೆಸರಲ್ಲೂ ಕೋಟಿಗಟ್ಟಲೇ ಆಸ್ತಿಯ ಜೊತೆಗೆ ಕೋಟಿಗಟ್ಟಲೇ ಸಾಲ ಇರುವುದನ್ನು ದೃಢೀಕರಿಸಿದ್ದಾರೆ. ಉಮೇದುವಾರಿಕೆ ಸಲ್ಲಿಸಿ ಆಸ್ತಿ ಘೋಷಿಸಿಕೊಂಡ ಅಭ್ಯರ್ಥಿಗಳ ಪೈಕಿ ಪ್ರಮುಖರ ಆಸ್ತಿ ವಿವರ ಹೀಗಿದೆ.

7.65 ಕೋಟಿ ಸ್ಥಿರಾಸ್ತಿ, 4.49 ಕೋಟಿ ಸಾಲ :

ಎಸ್.ಆರ್.ಶ್ರೀನಿವಾಸ್ :

        ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ಉಮೇದುವಾರಿಕೆ ಸಲ್ಲಿಸಿರುವ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ತಮ್ಮ ಆಸ್ತಿ ಘೋಷಿಸಿಕೊಂಡಿದ್ದು ತಮ್ಮ ಬಳಿ 3.72 ಕೋಟಿ ಮೌಲ್ಯದ ಚರಾಸ್ತಿ, ಪತ್ನಿ ಭಾರತಿ ಶ್ರೀನಿವಾಸ್ ಬಳಿ 1.65 ಕೋಟಿ ಮೌಲ್ಯದ ಚರಾಸ್ತಿ, ಪುತ್ರ ದುಷ್ಯಂತ್ ಬಳಿ 2,82,000 ಮೌಲ್ಯದ ಚರಾಸ್ತಿ ಇರುವುದಾಗಿ ಘೋಷಿಸಿದ್ದು, ಕೈನಲ್ಲಿ 2.50 ಲಕ್ಷ ನಗದು ಹೊಂದಿದ್ದು, ಹುಂಡೈ ಸ್ಯಾಂಟ್ರೋ, ಫಾರ್ಚೂನರ್ ಹಾಗೂ ಆಡಿ ಕ್ಯೂ ತ್ರಿ ಸೇರಿ 5 ಕಾರು, ತಮ್ಮ ಕುಟುಂಬದ ಬಳಿ 2 ಕೆಜಿ 400 ಗ್ರಾಂ ಬಂಗಾರ, 13 ಕೆಜಿ ಬೆಳ್ಳಿ ಹೊಂದಿರುವುದಾಗಿ ತಿಳಿಸಿದ್ದಾರೆ. ಸ್ತಿರಾಸ್ಥಿಗಳ ಪೈಕಿ 7.65 ಕೋಟಿ ಮೌಲ್ಯದ ಜಮೀನು, ಫ್ಲಾಟ್, ನಿವೇಶನ ಹೊಂದಿದ್ದು, ಪತ್ನಿ ಹೆಸರಲ್ಲಿ 4.18 ಕೋಟಿ ಮೌಲ್ಯದ ಸ್ತಿರಾಸ್ಥಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿAದ 4.49 ಕೋಟಿ ಸಾಲ ಮಾಡಿದ್ದು, ಪತ್ನಿ 1.50 ಕೋಟಿ ಸಾಲ, ಪುತ್ರ 28.77 ಲಕ್ಷ ಸಾಲ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಕೆಎನ್‌ಆರ್‌ಗಿಂತ ಪತ್ನಿ ಸಂಪತ್ತು-ಸಾಲವೆ ಅಧಿಕ :

ಕೆ.ಎನ್.ರಾಜಣ್ಣ :

       ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಕೆ.ಎನ್.ರಾಜಣ್ಣ ಅವರು, ತಮ್ಮ ಬಳಿ 1.56 ಕೋಟಿ ಚರಾಸ್ತಿ, ಪತ್ನಿ ಶಾಂತಲಾ ಬಳಿ 11.59 ಕೋಟಿ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಚರಾಸ್ತಿಗಳ ಪೈಕಿ ತಮ್ಮ ಹೆಸರಿನಲ್ಲಿ ಟಾಟಾ ಲಾರಿ, ಟ್ರ್ಯಾಕ್ಟರ್, ಪತ್ನಿ ಹೆಸರಿನಲ್ಲಿ ಬಿಎಂಡಬ್ಲಯೂ ಕಾರ್, ಮಾರುತಿ ಸಿಯಾಸ್ ಕಾರ್, ಟಿಪ್ಪರ್ ಲಾರಿ ಹೊಂದಿದ್ದು 12.89 ಲಕ್ಷದ ಚಿನ್ನಾಭರಣ ಹೊಂದಿದ್ದಾರೆ. ಸ್ತಿರಾಸ್ಥಿಗಳ ಪೈಕಿ ಕೆಎನ್‌ಆರ್ ಅವರು 9.34 ಕೋಟಿ ಮೌಲ್ಯದ ಜಮೀನು, ನಿವೇಶನ, ಕಟ್ಟಡ ಹೊಂದಿದ್ದು, ಪತ್ನಿ ಹೆಸರಿನಲ್ಲಿ 8.83 ಕೋಟಿ ಮೊತ್ತದ ಸ್ತಿರಾಸ್ಥಿ ಇದೆ. ಸಾಲ-ಹೊಣೆಗಾರಿಕೆ ಪೈಕಿ ಕೆಎನ್‌ಆರ್ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲಗಾರರಾಗಿದ್ದು, ಪತ್ನಿ 11.20 ಕೋಟಿ ಸಾಲಗಾರರಾಗಿದ್ದಾರೆ.

ಪತಿಗಿಂತ ಪತ್ನಿಯೆ ಸಿರಿವಂತೆ :

ಕೆ.ಎಸ್.ಷಡಾಕ್ಷರಿ :

       ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರಿವ ಕೆ.ಎಸ್.ಷಡಾಕ್ಷರಿ ಅವರು ತಮ್ಮ ಬಳಿ 28.92 ಲಕ್ಷ ಮೌಲ್ಯದ 2 ಕಾರು, ಟ್ರ್ಯಾಕ್ಟರ್, ಟ್ರೈಲರ್, 15 ಕೆಜಿ ಬೆಳ್ಳಿ ಸೇರಿ ಇತರೆ ಚರಾಸ್ಥಿಗಳನ್ನು ಹೊಂದಿದ್ದು, ಪತ್ನಿ ಶಿವಗಂಗ ಅವರು 3.71 ಕೋಟಿ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಸ್ತಿರಾಸ್ಥಿಗಳ ಪೈಕಿ ತಮ್ಮ ಬಳಿ ಸ್ವಯಾರ್ಜಿತ, ಪಿರ್ತ್ರಾಜಿತ ಸೇರಿ 1.5 ಕೋಟಿ ಮೌಲ್ಯದ ಸ್ಥಿರಾಸ್ತಿಯಿದ್ದು, ಪತ್ನಿ ಹೆಸರಲ್ಲಿ 4.98 ಕೋಟಿ ಮೌಲ್ಯದ ಸ್ತಿರಾಸ್ಥಿ ಇದೆ ಎಂದು ಘೋಷಿಸಿದ್ದಾರೆ. ಇದರೊಂದಿಗೆ ತಾವು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸುಮಾರು 94 ಲಕ್ಷ ಸಾಲ ಮಾಡಿದ್ದು, ಪತ್ನಿ ಸಹ 3 ಲಕ್ಷ ಸಾಲ ಮಾಡಿರುವುದಾಗಿ ತಿಳಿಸಿದ್ದಾರೆ. 2016-17ನೇ ಸಾಲಿನಲ್ಲಿ ಷಡಾಕ್ಷರಿಯವರು 83.85 ಲಕ್ಷ ತೆರಿಗೆ ಬಾಕಿ ಪಾವತಿ ಮಾಡಬೇಕಾದ ಪ್ರಕರಣ ವಿಚಾರಣೆಯಲ್ಲಿದೆ.

92 ಕೋಟಿ ಚರಾಸ್ತಿ ಹೊಂದಿರುವ ಮಸಾಲೆ ಜಯರಾಮ್ :

ಮಸಾಲೆ ಜಯರಾಮ್ :

      ತುರುವೇಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಎ.ಎಸ್.ಜಯರಾಮ್ (ಮಸಾಲೆ) ಅವರು ತಮ್ಮ ಬಳಿ 28.48 ಕೋಟಿ ಮೌಲ್ಯದ ಚರಾಸ್ತಿ ಘೋಷಿಸಿಕೊಂಡಿದ್ದು, ಪತ್ನಿ ಸುನಂದ ಅವರ ಬಳಿ 23.90 ಕೋಟಿ ಹಾಗೂ ಪುತ್ರ ತೇಜು ಬಳಿ 16.45 ಕೋಟಿ, ಪುತ್ರಿ ಪೂಜ ಬಳಿ 23.19 ಕೋಟಿ ಮೌಲ್ಯದ ಚರಾಸ್ತಿಯಿದೆ ಎಂಬುದಾಗಿ ಘೋಷಿಸಿಕೊಂಡಿದ್ದಾರೆ. ಇನ್ನು ಸ್ತಿರಾಸ್ಥಿ ಪೈಕಿ ಸ್ವಯಾರ್ಜಿತ, ಪಿತ್ರಾರ್ಜಿತ ಸೇರಿ 4.44 ಕೋಟಿ ಮೌಲ್ಯದ ಸ್ತಿರಾಸ್ಥಿಯನ್ನು ಹೊಂದಿದ್ದು, ಪತ್ನಿ ಬಳಿ 9.5 ಕೋಟಿ ಸ್ತಿರಾಸ್ಥಿಯನ್ನು ಹೊಂದಿದ್ದಾರೆ. ಸಾಲ ಮತ್ತು ಹೊಣೆಗಾರಿಕೆ ಪೈಕಿ ಶಾಸಕ ಜಯರಾಮ್ ಬ್ಯಾಂಕ್ ಹಣಕಾಸು ಸಂಸ್ಥೆಗಳಿಗೆ 3.21 ಕೋಟಿ ಸಾಲ ಪಾವತಿಸಬೇಕಿದ್ದು, ಪತ್ನಿ 23.40 ಲಕ್ಷ ಸಾಲಗಾರರಾಗಿದ್ದಾರೆ.

30 ಕೋಟಿ ಆಸ್ತಿ ಘೋಷಿಸಿರುವ ಶಾಸಕ

ಎಂ.ವಿ.ವೀರಭದ್ರಯ್ಯ :

      ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಎಂ.ವೀರಭದ್ರಯ್ಯ ಅವರು ತಮ್ಮ ಆಸ್ತಿ ಘೋಷಣಾ ಪತ್ರದಲ್ಲಿ ತಮ್ಮ ಬಳಿ 10.67 ಕೋಟಿ ಮೌಲ್ಯದ ಚರಾಸ್ಥಿ ಹೊಂದಿದ್ದು ಪತ್ನಿ ಗಂಗಮ್ಮ ಅವರ ಬಳಿ 80.40 ಲಕ್ಷದ ಚರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಸ್ತಿರಾಸ್ಥಿಯ ಪೈಕಿ 14.24 ಕೋಟಿ ಸ್ವಯಾರ್ಜಿತ ಸ್ವತ್ತು. 4.73 ಕೋಟಿ ಪಿತ್ರಾರ್ಜಿತ ಸೇರಿ ಒಟ್ಟು 18.97 ಕೋಟಿ ಸ್ತಿರಾಸ್ಥಿ ಹೊಂದಿರುವುದಾಗಿ ತಿಳಿಸಿದ್ದು ಪತ್ನಿಯ ಹೆಸರಿನಲ್ಲಿ 1.66 ಕೋಟಿ ಸ್ತಿರಾಸ್ಥಿ ಇದೆ ಎಂದು ಘೋಷಿಸಿದ್ದಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ 16.93 ಕೋಟಿ ಸಾಲ ಪಾವತಿಸಬೇಕಿದ್ದು, ಪತ್ನಿಯು 2.15 ಕೋಟಿ ಸಾಲ ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ. ತಾವು ಅಧಿಕಾರಿಯಾಗಿದ್ದಾಗ ಕಡತ ವಿಲೇವಾರಿ ಸಂಬಂಧದ ಪ್ರಕರಣ ಬಾಕಿ ಇರುವುದಾಗಿಯೂ ಘೋಷಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap