ಕಾನ್ಪುರ
ತಂದೆಯ ಮೃತದೇಹ ಕೊಂಡೊಯ್ಯುತ್ತಿರುವಾಗ ಹೃದಯಾಘಾತದಿಂದ ಮಗನೂ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹುಟ್ಟು-ಸಾವು ಎರಡನ್ನೂ ಮನುಷ್ಯ ನಿರ್ಧರಿಸಲು ಸಾಧ್ಯವಿಲ್ಲ. ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಅಂದಾಜಿಸಲಾಗದು. ಹಾಗೆಯೇ ತಂದೆಯ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದ ಮಗ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿದೆ.
ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಅತೀಕ್ ಅವರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಮತ್ತು ವೈದ್ಯರು ಅವರ ಸಾವನ್ನು ದೃಢಪಡಿಸಿದರು. ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು, ಕುಟುಂಬದವರು ಹಾಗೂ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದಾರೆ.
ಲೈಕ್ ಅಹ್ಮದ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯವನಾದ ಅತೀಕ್, ಯಾವಾಗಲೂ ತನ್ನ ತಂದೆಗೆ ಹತ್ತಿರವಾಗಿದ್ದ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ತಂದೆ ಮತ್ತು ಮಗನ ಶವಗಳನ್ನು ಸ್ಥಳೀಯ ಸ್ಮಶಾನದಲ್ಲಿ ಹೂಳಲಾಯಿತು.
