ಗೂಳೂರಿನ ಗಣಪತಿಗೆ ಮೊದಕ ಹೋಮ

ತುಮಕೂರು:


ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿ ಸನ್ನಿದಾನದಲ್ಲಿ ಶ್ರೀನಿಕೇತನ ಭಕ್ತ ಮಂಡಳಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ವಿಶೇಷವಾಗಿ 1008 ಮೋದಕ,ಅಷ್ಟದ್ರವ್ಯಗಳಿಂದ ವಿಶೇಷ ಹೋಮವನ್ನು ನೆರವೇರಿಸಲಾಯಿತು.

ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ನಿರ್ಮೂಲನೆಯಾಗಲೆಂದು ವಿದ್ವಾಂಸ ಜಿ.ಕೆ.ಭೀಮರಾವ್ ಅವರ ನೇತೃತ್ವದಲ್ಲಿ ಋತ್ವಿಜರು ಭಾನುವಾರ ಬೆಳಿಗ್ಗೆಯಿಂದಲೇ ಹೋಮವನ್ನು ನೆರವೇರಿಸಿದರು. 1008 ಮೋದಕಗಳು, ಅಷ್ಟದ್ರವ್ಯಗಳು, ವಿವಿಧ ಫಲ-ಪುಷ್ಪಗಳಿಂದ 32 ವಿಧದ ಮಹಾಗಣಪತಿ ಹೋಮವನ್ನು ನೆರವೇರಿಸಿ ಪೂರ್ಣಾಹುತಿ ಸಮರ್ಪಿಸಲಾಯಿತು.

ಈ ವೇಳೆ ಮಾತನಾಡಿದ ಜಿ.ಕೆ.ಭೀಮರಾವ್ ಅವರು 3 ದಶಕದ ಹಿಂದೆ ಗೂಳೂರು ಗಣಪತಿಗೆ ಸರಿಯಾದ ಗುಡಿಯಿರಲಿಲ್ಲ. ತುಮಕೂರು ನಗರದಿಂದ ತಗಡು ತರಿಸಿ ಶೆಡ್ ಹಾಕಿ ಗಣಪತಿಯನ್ನು ಕೂರಿಸಲಾಗುತಿತ್ತು. ಮಂದಿರ ನಿರ್ಮಾಣ ಕಾರ್ಯ ಕೈಗೂಡಿರಲಿಲ್ಲ. ಅದೇ ಸಂದರ್ಭದಲ್ಲಿ ನನ್ನ ಸ್ವಪ್ನದಲ್ಲಿ ಮನೆ ಬಳಿ ಬಾಲಕನೊಬ್ಬ ಕಾಣಿಸಿಕೊಂಡು, ಏನು ಬೇಕೆಂದು ಕೇಳಿದಾಗ ಬೆಂಕಿಯನ್ನು ತೋರಿಸಿದನು.

ನನಗೆ ಏನೆಂದು ಅರ್ಥವಾಗಲಿಲ್ಲ. ಅದು ಹೋಮವೆಂದು ತಿಳಿದಾಗ ಮಹಾಗಣಪತಿಯ ಇಚ್ಚೆ, ಆಜ್ಞೆ ಇದೆ ಎಂದು ಭಾವಿಸಿು ಕೇವಲ 21 ಮೋದಕಗಳಿಂದ ಹೋಮ ಪ್ರಾರಂಭಿಸಿದೆವು. ಭಕ್ತ ಮಂಡಳಿಯವರು ಹಾಗೂ ಭಕ್ತರ ಸಹಕಾರದೊಂದಿಗೆ ಇಂದು 1008 ಮೋದಕಗಳಿಂದ ಹೋಮ ನೆರವೇರಿಸುವ ಹಂತಕ್ಕೆ ತಲುಪಿದ್ದೇವೆ. ಗಣಪತಿಗೂ ಭವ್ಯ ಆಲಯ ನಿರ್ಮಾಣಗೊಂಡಿದ್ದು, ಹೋಮದಲ್ಲಿ ಭಾಗಿಯಾಗಿ ಗಣಪತಿ ದರ್ಶನ ಮಾಡಿದವರ ಇಷ್ಟಾರ್ಥವೂ ಈಡೇರುತ್ತಿದ್ದು, ಎಲ್ಲರಿಗೂ ಶುಭಕೋರಿದರು. ಭಕ್ತ ಮಂಡಳಿ ಅಧ್ಯಕ್ಷ ಗೂಳೂರು ಶಿವಕುಮಾರ್ ಅವರ ತಂಡದವರ ಸಹಕಾರವನ್ನು ಇದೇ ವೇಳೆ ಸ್ಮರಿಸಿದರು. ಹೋಮದಲ್ಲಿ ಭಾಗಿದಾರರಾದವರಿಗೆ ಗಣಪತಿ ಡಾಲರ್ ಹಾಗೂ ಪ್ರಸಾದವನ್ನು ನೀಡಿ ಆಶೀರ್ವದಿಸಲಾಯಿತು. ಮಣ್ಣಿನ ಗಣಪತಿಗೆ ವಿಶೇಷವಾಗಿ 1008 ಕಡುಬಿನ ಹಾರ ಹಾಕಿ ಪೂಜೆ ಸಲ್ಲಿಸಲಾಯಿತು.

ಡಿ.11-12ರಂದು ಗಣಪತಿ ವಿಸರ್ಜನೆ:
ಭಕ್ತ ಮಂಡಳಿ ಅಧ್ಯಕ್ಷ ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್ ಮಾತನಾಡಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದಹೋಮವನ್ನು ಕಾರ್ತಿಕ ಮಾಸದ ಸಂದರ್ಭದಲ್ಲಿ ಜಿ.ಕೆ.ಭೀಮರಾವ್ ಅವರ ನೆರವೇರಿಸಿಕೊಂಡು ಬರುತ್ತಿದ್ದು, ಸರ್ವರಿಗೂ ಒಳಿತಾಗುತ್ತಿದೆ. ಈ ಬಾರಿ ಪ್ರತಿಷ್ಠಾಪನೆಗೊಂಡಿರುವ ಗಣಪತಿಯನ್ನು ಡಿ.11-12ರಂದು ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap