ಮತದಾನಕ್ಕೆ ಕ್ಷಣಗಣನೆ:ಮತಯಂತ್ರದಲ್ಲಿ ಭದ್ರವಾಗಲಿದೆ 11 ಕ್ಷೇತ್ರಗಳ ಅಭ್ಯರ್ಥಿಗಳು ಭವಿಷ್ಯ

ತುಮಕೂರು

      ಇಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 2683 ಮತಗಟ್ಟೆಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ.

      ಜಿಲ್ಲೆಯ 2683 ಮತಗಟ್ಟೆಗಳಲ್ಲಿ ನಡೆಯುವ ಮತದಾನ ಕಾರ್ಯಕ್ಕೆ 11644 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಜಿಲ್ಲಾ ಕೇಂದ್ರ ತುಮಕೂರು ಸೇರಿದಂತೆ 10 ತಾಲ್ಲೂಕು ಕೇಂದ್ರಗಳಿಂದಲೂ 11 ವಿಧಾನಸಭಾ ಕ್ಷೇತ್ರಗಳಿಗೆ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಪಡೆದು ಬಸ್‌ಗಳಲ್ಲಿ ನಿಯೋಜನೆಗೊಂಡಿರುವ ಮತಗಟ್ಟೆಗಳಿಗೆ ತೆರಳಿದರು.

     ಚಿಕ್ಕನಾಯಕನಹಳ್ಳಿ ಕ್ಷೇತ್ರದ 262 ಮತಗಟ್ಟೆಗಳಿಗೆ 1152 ಅಧಿಕಾರಿಗಳು ಮತ್ತು ಸಿಬ್ಬಂದಿ, ತಿಪಟೂರು ಕ್ಷೇತ್ರದ 233 ಮತಗಟ್ಟೆಗಳಿಗೆ 1024 ಅಧಿಕಾರಿಗಳು, ತುರುವೇಕೆರೆ ಕ್ಷೇತ್ರದ 229 ಮತಗಟ್ಟೆಗಳಿಗೆ 1008 ಅಧಿಕಾರಿಗಳು, ಕುಣಿಗಲ್ ಕ್ಷೇತ್ರದ 264 ಮತಗಟ್ಟೆಗಳಿಗೆ 1160 ಅಧಿಕಾರಿಗಳು, ತುಮಕೂರು ನಗರ ಕ್ಷೇತ್ರದ 254 ಮತಗಟ್ಟೆಗಳಿಗೆ 1116 ಅಧಿಕಾರಿಗಳು ಮತ್ತು ಸಿಬ್ಬಂದಿ, ತುಮಕೂರು ಗ್ರಾಮಾಂತರ ಕ್ಷೇತ್ರದ 226 ಮತಗಟ್ಟೆಗಳಿಗೆ 996 ಅಧಿಕಾರಿಗಳು ಮತ್ತು ಸಿಬ್ಬಂದಿ, ಕೊರಟಗೆರೆ ಕ್ಷೇತ್ರದ 242 ಮತಗಟ್ಟೆಗಳಿಗೆ 904 ಅಧಿಕಾರಿಗಳು, ಗುಬ್ಬಿ ಕ್ಷೇತ್ರದ 212 ಮತಗಟ್ಟೆಗಳಿಗೆ 932 ಸಿಬ್ಬಂದಿ, ಸಿರಾ ಕ್ಷೇತ್ರದ 267 ಮತಗಟ್ಟೆಗಳಿಗೆ 1176 ಅಧಿಕಾರಿಗಳು, ಪಾವಗಡ ಕ್ಷೇತ್ರದ 246 ಮತಗಟ್ಟೆಗಳಿಗೆ 1084 ಅಧಿಕಾರಿಗಳು ಹಾಗೂ ಮಧುಗಿರಿ ಕ್ಷೇತ್ರದ 248 ಮತಗಟ್ಟೆಗಳಿಗೆ 1092 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಲಾಗಿದೆ.

     ತುಮಕೂರು ನಗರ ಕ್ಷೇತ್ರದ ಮತಗಟ್ಟೆಗಳಿಗೆ ಸರ್ಕಾರಿ ಪ.ಪೂ. ಕಾಲೇಜು ಮಸ್ಟರಿಂಗ್ ಕೇಂದ್ರದಿAದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಯಂತ್ರಗಳೊAದಿಗೆ ತೆರಳಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಮತಗಟ್ಟೆಗಳಿಗೆ ಸರ್ವೋದಯ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಕೇಂದ್ರದಿಂದ, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮತಗಟ್ಟೆಗಳಿಗೆ ಚಿ.ನಾ.ಹಳ್ಳಿಯ ಸರ್ಕಾರಿ ಸ್ವತಂತ್ರ ಪ.ಪೂ. ಕಾಲೇಜು ಮಸ್ಟರಿಂಗ್ ಕೇಂದ್ರದಿಂದ, ತಿಪಟೂರು ಕ್ಷೇತ್ರದ ಮತಗಟ್ಟೆಗಳಿಗೆ ತಿಪಟೂರಿನ ಸರ್ಕಾರಿ ಬಾಲಕರ ಪ.ಪೂ. ಕಾಲೇಜು, ತುರುವೇಕೆರೆಯ ಮತಗಟ್ಟೆಗಳಿಗೆ ತುರುವೇಕೆರೆ ಸರ್ಕಾರಿ ಪ.ಪೂ. ಕಾಲೇಜು, ಕುಣಿಗಲ್ ಮತಗಟ್ಟೆಗಳಿಗೆ ಸರ್ಕಾರಿ ಮಹಾತ್ಮಗಾಂಧಿ ಪ.ಪೂ. ಕಾಲೇಜು, ಗುಬ್ಬಿ ಮತಗಟ್ಟೆಗಳಿಗೆ ಮಾರನಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆಯ ಸರ್ಕಾರಿ ಪ.ಪೂ. ಕಾಲೇಜು, ಸಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಮಧುಗಿರಿ ಕ್ಷೇತ್ರಕ್ಕೆ ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಟರಿಂಗ್ ಕೇಂದ್ರಗಳಿAದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಸ್‌ಗಳಲ್ಲಿ ನಿಯೋಜನೆಗೊಂಡಿರುವ ಮತಗಟ್ಟೆಗಳಿಗೆ ಕರೆದೊಯ್ಯಲಾಯಿತು.

      ಜಿಲ್ಲೆಯಲ್ಲಿ ಒಟ್ಟು 1120698 ಪುರುಷ ಮತದಾರರು, 1127126 ಮಹಿಳಾ ಮತದಾರರು, 108 ಇತರೆ ಸೇರಿದಂತೆ ಜಿಲ್ಲೆಯಲ್ಲಿ 2247932 ಮತದಾರರು ಹಾಗೂ 776 ಸೇವಾ ಮತದಾರರು ನಾಳೆ ತಮ್ಮ ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

     2683 ಮತಗಟ್ಟೆಗಳಿಗೆ 362 ಬಸ್‌ಗಳು, 106 ಜೀಪ್ ಬುಲೇರೋ, ಮಿನಿಬಸ್ ಸೇರಿದಂತೆ ಒಟ್ಟು 564 ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದ ಅವರು, 2683 ಮತಗಟ್ಟೆಗಳ ಪೈಕಿ 510 ಕ್ರಿಟಿಕಲ್ ಮತಗಟ್ಟೆಗಳು(ವಲ್ನರೆಬಲ್) ಹಾಗೂ 1363 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ.
2683 ಮತಗಟ್ಟೆಗಳಿಗೆ 3225 ಕಂಟ್ರೋಲ್ ಯೂನಿಟ್ ಹಾಗೂ 3225 ಬ್ಯಾಲೆಟ್ ಯೂನಿಟ್‌ಗಳನ್ನು ಶೇ. 120 ರಷ್ಟು ಹಂಚಿಕೆ ಮಾಡಲಾಗಿದೆ.

    ಮತದಾರರು ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಡ್ರೆöÊವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಭಾವಚಿತ್ರ ಇರುವ ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ ಸೇರಿದಂತೆ ವಿವಿಧ 13 ಗುರುತಿನ ಚೀಟಿಗಳನ್ನು ಬಳಸಿ ಮತದಾನ ಮಾಡಲು ಅವಕಾಶ ಇದೆ.

3 ಸಾವಿರ ಪೊಲೀಸರ ನಿಯೋಜನೆ

    ಜಿಲ್ಲೆಯಲ್ಲಿ ನಾಳೆ ನಡೆಯಲಿರುವ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಬಂದೋ ಬಸ್ತ್ ಕಾರ್ಯಕ್ಕಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 31 ಕಂಪೆನಿ ಸಿಆರ್‌ಪಿಎಫ್, 21 ಬಿಎಸ್‌ಎಫ್, 10 ಜಾರ್ಖಂಡ್ ಸೇನಾ ಪೊಲೀಸರು ಮತ್ತು 500 ತಮಿಳುನಾಡು ಪೊಲೀಸರು ಹಾಗೂ ಹೋಂಗಾರ್ಡ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap