ದೆಹಲಿ:
ಜೇನು ನೊಣ ಎಂದ್ರೆ ಯಾರಿಗ್ತಾನೇ ಭಯ ಇಲ್ಲಾ ಹೇಳಿ. ಜೇನುನೊಣಗಳನ್ನು ಕಂಡರೆ ಭಯದಿಂದ ದೇಹದಲ್ಲಿ ವಿಚಿತ್ರ ಕಂಪನ ಉಂಟಾಗುತ್ತದೆ. ಜೇನುನೊಣಗಳ ಕಡಿತವು ಅಸಹನೀಯ ನೋವು ಮತ್ತು ಊತವನ್ನು ಉಂಟುಮಾಡುತ್ತದೆ. ಆದ್ರೆ, ಇಲ್ಲೊಬ್ಬ ಯುವಕ ನೂರಾರು ಜೇನುನೊಣಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಜೇನುನೊಣಗಳು ಮರ, ಛಾವಣಿ ಅಥವಾ ಗೋಡೆಯ ಮೇಲೆ ತಮ್ಮ ಜೇನುಗೂಡನ್ನು ಮಾಡುತ್ತವೆ, ಆದರೆ ಜೇನುನೊಣಗಳು ಮಾನವನ ಕೈಯಲ್ಲಿ ಜೇನುಗೂಡು ಮಾಡುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ವೈರಲ್ ಆಗಿರುವ ಈ ವೀಡಿಯೋ ನೋಡಿದರೆ ನೀವೂ ಬೆಚ್ಚಿ ಬೀಳುತ್ತೀರಿ.
ರಕ್ಷಿತ್ ಶೆಟ್ಟಿ ಅಭಿನಯದ ‘ಸಕುಟುಂಬ ಸಮೇತ’ ಚಿತ್ರ ಮೇ 27ಕ್ಕೆ ಬಿಡುಗಡೆ!
ಈತನ ಎಡಗೈಯಲ್ಲಿ ಒಂದು ಜೇನು ಸಮೂಹವೇ ಅಡಗಿದ್ದು, ರಸ್ತೆಯಲ್ಲಿ ಆರಾಮಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ನೀವು ಇಲ್ಲಿ ನೋಡಬಹುದು.ಈ ವೀಡಿಯೊವನ್ನು ಬ್ರಿಟಿಷ್ ವೆಬ್‌ಸೈಟ್ ದಿ ಸನ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
