ಯಾವುದೇ ಧರ್ಮವೂ ಸಹ ಹಿಂಸೆ , ಕೊಲೆ ಮಾಡಿ ಎನ್ನುವುದಿಲ್ಲ : ಸಿದ್ದರಾಮಯ್ಯ

ವಿಜಯನಗರ

    ಕರ್ನಾಟಕದ ಜನ ಪ್ರೀತಿಯಿಂದ ನನ್ನನ್ನು ಟಗರು ಎಂದು ಕರೆಯುತ್ತಾರೆ. ಸಮಾಜದಲ್ಲಿನ ಎಲ್ಲಾ ಜಾತಿಯ ಬಡವರಿಗೆ ಸಹಾಯವಾಗಲೆಂಬ ಉದ್ದೇಶದಿಂದ ಕೆಲಸ ಮಾಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

   ಇನ್ನು ಜನ ನಾನು ಕುರುಬ ಜಾತಿಯಲ್ಲಿ ಹುಟ್ಟಿದೆ ಎಂಬುದಕ್ಕೆ ನನ್ನನ್ನು ಟಗರು ಎನ್ನುವುದಿಲ್ಲ.ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಅನ್ನಭಾಗ್ಯ ಅಕ್ಕಿ ನೀಡಿದೆವು ಅದು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿದ್ವಾ? ..ಇಲ್ಲಾ ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ ಅವರೆಲ್ಲರ ಒಳಿತಿಗಾಗಿ ಮಾಡಿದ್ವಿ . ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿದ್ದೆವಾ? ಶೂಭಾಗ್ಯ, ಇಂದಿರಾ ಕ್ಯಾಂಟೀನ್‌, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಯನ್ನು ಬರೀ ಹಿಂದುಳಿದ ಜಾತಿಗಳಿಗೆ ಸೀಮಿತವಾಗಿ ಜಾರಿ ಮಾಡಿರಲಿಲ್ಲ, ಈ ನಾಡಿನಲ್ಲಿ ಆರ್ಥಿಕವಾಗಿ ಯಾರೆಲ್ಲ ದುರ್ಬಲರಿದ್ದಾರೊ ಅವರಿಗೆಲ್ಲ ಸಹಾಯವಾಗಲಿ ಎಂದು ಮಾಡಿದ್ದು ಎಂದರು.

     ಇವರು ಹೇಳುವ ಧರ್ಮದ ಮೂಲ ಪ್ರಕೃತಿ ಯಾವುದೆಂದು ನನಗಂತೂ ತಿಳಿಯುತ್ತಿಲ್ಲ ವಿಶ್ವದಲ್ಲಿನ ಯಾವುದೇ ಧರ್ಮವೂ ಸಹ ಹಿಂಸೆ ಮಾಡಿ, ಕೊಲೆ ಮಾಡಿ, ಇನ್ನೊಬ್ಬರನ್ನು ನೋಯಿಸಿ ಎಂದು ಹೇಳುವುದಿಲ್ಲ. ಧರ್ಮಗಳು ಇರುವುದು ಜನರ ಕಲ್ಯಾಣಕ್ಕೆ. ಧರ್ಮ ಜನರ ಬದುಕಿಗೆ ಸನ್ಮಾರ್ಗವನ್ನು ತೋರಿಸುವಂತಿರಬೇಕು. ಹಾಗಾಗಿಯೇ ಧರ್ಮವನ್ನು “ವೇ ಆಫ್‌ ಲೈಫ್” ಎಂದು ಇಂಗ್ಲೀಷ್‌ ನಲ್ಲಿ ಕರೆಯುತ್ತಾರೆ ಅಂದರೆ ಧರ್ಮವನ್ನು ಜೀವನದ ದಾರಿ ಎನ್ನಲಾಗುತ್ತದೆ . ಬಸವಾದಿ ಶರಣರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ ಎಂದು ಹೇಳಿದ್ದರು. ಮನುಷ್ಯತ್ವ ಇಲ್ಲದ ಧರ್ಮವನ್ನು ಯಾರು ಕೂಡ ಪಾಲನೆ ಮಾಡಬಾರದು, ಅಂಥಾ ಧರ್ಮವನ್ನು ತಿರಸ್ಕಾರ ಮಾಡಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap