ತುಮಕೂರು :
ಗಣೇಶ ವಿಸರ್ಜನೆಗೆಂದು ತೆರಳಿದ್ದ ವೇಳೆ ತಂದೆ ಮಗ, ಸ್ನೇಹಿತ, ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲಯ ತುರುವೆಕೆರೆ ತಾಲೂಕಿನ ಮಾರಸಂದ್ರ ಗ್ರಾಮದಲ್ಲಿ ನಡೆದಿದೆ
ರೇವಣ್ಣ (50), ರೇವಣ್ಣ ಪುತ್ರ ಶರತ್ (20) ಹಾಗೂ ದಯಾನಂದ್ (28) ಮೃತ ದುರ್ದೈವಿಗಳು. ಮೃತ ದಯಾನಂದ್‌ಗೆ ಇತ್ತೀಚೆಗೆ ಮದುವೆ ಆಗಿತ್ತು ಎನ್ನಲಾಗಿದೆ. ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಗ್ರಾಮದಲ್ಲಿ ಇಟ್ಟಿದ್ದ ಗಣೇಶನ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ
ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ