ವ್ಯಕ್ತಿ ಮೃತಪಟ್ಟು 2 ದಿನಗಳಾದರು ಸಿಗದ ಶವ, ಕಾರಣ ನಿಗೂಢ!

 ತಿಪಟೂರು : 

      ತಾಲ್ಲೂಕಿನ ಬೀರಸಂದ್ರ ಬಳಿ ಟ್ರ್ಯಾಕ್ಟರ್ ಕೆಲಸ ಮಾಡುವ ವೇಳೆ ಹಿಂಬದಿಯಿಂದ ಟ್ರ್ಯಾಕ್ಟರ್ ಚಲಿಸಿ ಮೃತಪಟ್ಟ ಘಟನೆ ನಡೆದಿದ್ದು ಮೃತಪಟ್ಟ ವ್ಯಕ್ತಿಯನ್ನು ಲಿಂಗರಾಜು(50) ಪೆದ್ದಿಹಳ್ಳಿ ಗ್ರಾಮಸ್ಥ ಎಂದು ತಿಳಿದುಬಂದಿದೆ.

      ಟ್ರ್ಯಾಕ್ಟರ್ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ಲಿಂಗರಾಜು ತೆಂಗಿನ ಚಿಪ್ಪನ್ನು ತುಂಬುವಂತಹ ಸಂದರ್ಭದಲ್ಲಿ ಹಿಂಬದಿಯಲ್ಲಿದ್ದ ವ್ಯಕ್ತಿಗೆ ಟ್ರ್ಯಾಕ್ಟರ್ ಗುದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಆದರೆ ಮೃತ ವ್ಯಕ್ತಿಯ ಪತ್ನಿ ಸ್ಥಳೀಯ ಪೋಲೀಸ್ ಠಾಣೆ ಕಿಬ್ಬನಹಳ್ಳಿ ಕ್ರಾಸ್‍ಗೆ ತೆರಳಿ ಕಂಪ್ಲೆಂಟ್ ನೀಡಲು ಹೋದಾಗ ಸಬ್‍ಇನ್ಸ್‍ಪೆಕ್ಟರ್ ವಿಜಯಕುಮಾರಿ ಯಾವುದೇ ದೂರು ಪಡೆಯಲು ಹಿಂದೇಟು ಹಾಕಿದ್ದು ಸುಳ್ಳು ದೂರು ದಾಖಲಿಸಿದ್ದಲ್ಲಿ ನಿಮ್ಮನ್ನೇ ಒಳಗೆ ಹಾಕುತ್ತೇನೆ ಎಂದು ಗದರಿಸಿದ್ದಾರೆ ಎಂದು ಜಿಲ್ಲಾದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕುಂದೂರು ತಿಮ್ಮಯ್ಯ ನೇರವಾಗಿ ಆರೋಪಿಸಿದ ಅವರು ಮೃತ ವ್ಯಕ್ತಿಯ ಶವವನ್ನು ಕೊಡಿ ಇಲ್ಲವೇ ಇಲ್ಲೇ ಮಣ್ಣುಮಾಡಿ ಎಂದು ಆಗ್ರಹಿಸುತ್ತಿರುವ ಕುಂದೂರು ತಿಮ್ಮಯ್ಯ ಮತ್ತಿತತರು ಡಿ.ವೈ.ಎಸ್ಪಿ ಕಛೇರಿ ಮುಂದೆ ಆಗ್ರಹಿಸುತ್ತಿರುವುದು.

      ಇದೇ ವೇಳೆ ಯಾವಾಗ ಕೆ.ಬಿ.ಕ್ರಾಸ್ ಸಬ್ ಇನ್ಸ್‍ಪೆಕ್ಟರ್ ದೂರು ಪಡೆಯಲು ನಿರಾಕರಿಸಿದ್ದರು.ಆತನ ಪತ್ನಿ ಈ ವೇಳೆ ರೊಚ್ಚಿಗೆದ್ದ ಸ್ಥಳೀಯರು ಮೃತನ ಪತ್ನಿ ತಿಪಟೂರು ಡಿ.ವೈ.ಎಸ್ಪಿ ಕಚೇರಿ ಬಳಿ ದೂರು ಸಲ್ಲಿಸಲು ಬಂದಿದ್ದು ಡಿ.ವೈ.ಎಸ್ಪಿ ಚಂದನ್ ಕುಮಾರ್ ಹೇಳಿದ ನಂತರ ದೂರು ಪಡೆದಿದ್ದಾರೆ ಎಂದು ಇದೇ ವೇಳೆ ಅವರು ಆಪಾದಿಸಿದ್ದಾರೆ. ಅಷ್ಟೇ ಅಲ್ಲದೆ ಸಬ್ ಇನ್ಸ್‍ಪೆಕ್ಟರ್ ವಿಜಯಕುಮಾರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಕ್ತಿಯ ಶವಪರೀಕ್ಷೆ ವೇಳೆ ವೈದ್ಯರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆಂದು ವರದಿ ನೀಡಿ ಎಂದಾಗ ಇಲ್ಲಿನ ಡಾಕ್ಟರ್‍ಗಳು ಯಾರು ಶವಪರೀಕ್ಷೆ ಮಾಡದೇ ಇದ್ದಿದ್ದರಿಂದ ಮೃತನ ಸಂಬಂಧಿಕರಿಗೂ ತಿಳಿಸದೆ ರಾತ್ರೋರಾತ್ರಿ ಹನ್ನೆರಡು ಗಂಟೆ ಸುಮಾರಿನಲ್ಲಿ ಮೃತನ ದೇಹವನ್ನು ತುಮಕೂರಿನ ಆಸ್ಪತ್ರೆಗೆ ಕಳುಹಿಸಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಆಪಾದಿಸಿದ್ದಲ್ಲದೇ ವ್ಯಕ್ತಿ ಮೃತಪಟ್ಟು 2 ದಿನಗಳಾದರೂ ಇಲ್ಲಿಯವರೆಗೂ ಯಾವುದೇ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ನೀಡದೇ ಇರುವುದು ಅನುಮಾನಾಸ್ಪದಕ್ಕೆ ಕಾರಣವಾಗಿದ್ದು ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link