ತಿಪಟೂರು :
ಕೊರೋನಾ ವ್ಯಾಕ್ಸಿನ್‍ಅನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಿಂದ ತಾಲ್ಲೂಕಿನ ಬಳುವನೇರಲು ಸಾಗಿಸುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಅರೆಕಾಲಿಕ ಕಿರಿಯ ಆರೋಗ್ಯ ಸಹಾಯಕ ಅಶೋಕ್ ಸಾವನ್ನಪ್ಪಿದ್ದಾನೆ.
ತಿಪಟೂರು ಹುಳಿಯಾರು ರಸ್ತೆಯ ಅಣ್ಣಾಪುರ ಗೇಟ್ ಬಳಿ ದ್ವಿಚಕ್ರವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಸಂದರ್ಭದಲ್ಲಿ ಕರುಣಾ ಟ್ರಸ್ಟ್‍ನಲ್ಲಿ ನಿವೃಹಿಸುತ್ತಿರುವ ಬಳುವನೇರಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕರ್ತವ್ಯನಿರ್ವಹಿಸುತ್ತಿದ್ದ ಅಶೋಕ್ ಇಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊರೋನಾ ಚುಚ್ಚುಮದ್ದನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ಮೃತಪಟ್ಟಿದ್ದಾನೆ.
ಸರ್ಕಾರ ಕೋಟ್ಯಾಂತರ ರೂಪಾಯಿಯನ್ನು ಖರ್ಚುಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತಿರುವ ಸರ್ಕಾರಕ್ಕೆ ಕೊರೋನಾ ವ್ಯಾಕ್ಸಿನ್ ಸಾಗಿಸಲು ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಮಾಡದಿರುವುದು ಒಂದು ದೊಡ್ಡ ಲೋಪವಾಗಿದ್ದು ಇಷ್ಟೆಲ್ಲಾ ಮಾಡುವ ಸರ್ಕಾರ ವ್ಯಾಕ್ಸಿನ್ ಸಾಗಿಸಲು ಸಾರಿಗೆ ವ್ಯವಸ್ಥೆ ಮಾಡಿದ್ದರೆ ಬಡ ಉದ್ಯೋಗಿಯು ಬದುಕುತ್ತಿರಲಿಲ್ಲವೇ ಮುಂದಿನ ದಿನಗಳಲ್ಲಿ ಚುಚ್ಚುಮದ್ದನ್ನು ಹೆಚ್ಚು ಜನರಿಗೆ ತಲುಪಿಸುವ ಸಾಧ್ಯತೆ ಇದ್ದು ಈಗಲಾದರು ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮಾಡುವುದೆ ಕಾಯ್ದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
